Select Your Language

Notifications

webdunia
webdunia
webdunia
webdunia

ಅಟಲ್ ಜೀ ಅಗಲಿಕೆಗೆ ಮಿಡಿದ ಕಂಬನಿ

ಅಟಲ್ ಜೀ ಅಗಲಿಕೆಗೆ ಮಿಡಿದ ಕಂಬನಿ
ಬಳ್ಳಾರಿ , ಶುಕ್ರವಾರ, 17 ಆಗಸ್ಟ್ 2018 (14:49 IST)
ಅಗಲಿದ ಹಿರಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ ನಿಧನಕ್ಕೆ ಪ್ರಮುಖರು ಶೋಕ ವ್ಯಕ್ತಪಡಿಸಿದ್ದಾರೆ. ಶಾಸಕ ಜಿ.ಸೋಮಶೇಖರ್ ರೆಡ್ಡಿ ಅವರಿಂದ ಶ್ರದ್ಧಾಂಜಲಿ ಸಲ್ಲಿಕೆ ಮಾಡಲಾಗಿದೆ. ಅಗಲಿದ ಅಜಾತಶತೃವಿಗೆ ಕಂಬನಿ ಮಿಡಿದ ಕಾರ್ಯಕರ್ತರು ನೆಚ್ಚಿನ ನಾಯಕ ಇನ್ನಿಲ್ಲದಿರುವ ವಿಷಯಕ್ಕೆ ದಿಗ್ಬ್ರಮೆಗೊಂಡಿದ್ದಾರೆ. 

ಅಜಾತ ಶತೃ, ದೇಶ ಕಂಡ ಅದ್ವಿತೀಯ ನಾಯಕ ಅಟಲ್ ಜೀ ನಿಧನದ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಶ್ರದ್ಧಾಂಜಲಿ ಸಭೆ ಹಮ್ಮಿಕೊಳ್ಳಲಾಗಿತ್ತು. ಶಾಸಕ ಜಿ.ಸೋಮಶೇಖರ್ ರೆಡ್ಡಿ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಶ್ರದ್ಧಾಂಜಲಿಯ ವೇಳೆ ಕಾರ್ಯಕರ್ತರು ಕಣ್ಣೀರುಗರೆದು ಶೋಕ ವ್ತಕ್ತಪಡಿಸಿದ್ರು. ಈವೇಳೆ ಮಾತನಾಡಿದ ಶಾಸಕ ಜಿ.ಸೋಮಶೇಖರ್ ರೆಡ್ಡಿ,  ಮಾಜಿ ಪ್ರಧಾನ ಮಂತ್ರಿ ಅಟಲ್ ಜೀ ಅವರ ಅಗಲಿಕೆಯ ಸುದ್ದಿ ಕೇಳಿ ತೀವ್ರ ಆಘಾತಕ್ಕೊಳಗಾಗಿದ್ದೇವೆ. ಅವರ ನಿಧನದ ವಿಷಯ ತಿಳಿದು ದುಃಖಭರಿತರಾಗಿದ್ದೇವೆ. ದೇವರು ಅವರ ಕುಟುಂಬ ವರ್ಗಕ್ಕೆ ಹಾಗೂ ದೇಶದ ಜನರಿಗೆ, ಪಕ್ಷದ ಕಾರ್ಯಕರ್ತರಿಗೆ, ಮುಖಂಡರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು. ಅಗಲಿದ ನಾಯಕನಿಗೆ  ಶೋಕಿಸಿದರು.






Share this Story:

Follow Webdunia kannada

ಮುಂದಿನ ಸುದ್ದಿ

ಅಟಲ್ ಬಿಹಾರಿ ವಾಜಪೇಯಿ ಅಂತಿಮ ಯಾತ್ರೆಗೆ ಜನವೋ ಜನ