Publish Date: Wed, 10 Jan 2024 (15:04 IST)
Updated Date: Wed, 10 Jan 2024 (12:06 IST)
ಇಂದಿನಿಂದ ಎಐಟಿಯುಸಿ ಕಾರ್ಯಕರ್ತೆಯರಿಂದ ಅಂಚೆ ಚಳುವಳಿ ಹಮ್ಮಿಕೊಳ್ಳಲಾಗಿದೆ.ವಿಶೇಷವಾಗಿ ಕೇಂದ್ರ ಸರ್ಕಾರದ ಗಮನ ಸೆಳೆಯಲು ಎಐಟಿಯುಸಿ ಮುಂದಾಗಿದೆ.ಎಲ್ಲಾ ಸಂಸದರಿಗೆ ತಮ್ಮ ಬೇಡಿಕೆ ಈಡೇರಿಸುವಂತೆ ಪತ್ರ ಎಐಟಿಯುಸಿ ಬರೆದಿದೆ.ಇಂದಿನಿಂದ ಅಂಚೆ ಚಳುವಳಿ ಆರಂಭಿಸಲಿರುವ ಕಾರ್ಯಕರ್ತರು ಸಜ್ಜಾಗಿದ್ದಾರೆ.
ಹಲವೆಡೆ ಸಂಸದರಿಗೆ ಈಗಾಗಲೇ ಕಾರ್ಯಕರ್ತರು ಪತ್ರ ಬರದಿದ್ದಾರೆ.ತಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಸಂಸದರಿಗೆ ಪತ್ರವಬರೆದಿದ್ದು,ಅಂಗನವಾಡಿ ,ಬಿಸಿಯೂಟ ಆಶಾ ಕಾರ್ಯಕರ್ತೆಯರ ಗೌರವ ಧನ ಹೆಚ್ಚಳ ಮಾಡುವಂತೆ ಬೇಡಿಕೆಗೆ ಒತ್ತಾಯಿಸಿದ್ದಾರೆ.ನಿವೃತ್ತಿ ವೇತನ ಹಾಗೂ ಇಎಸ್ ಐ ನೀಡುವ ಬಗ್ಗೆ ಪತ್ರದ ಮೂಲಕ ಸಂಸದ ಸದಾನಂದ ಗೌಡರಿಗೆ ಮನವಿ ಪತ್ರದ ಮೂಲಕ ಎಐಟಿಯುಸಿ ಬೇಡಿಕೆ ಇಟ್ಟಿದೆ.