Select Your Language

Notifications

webdunia
webdunia
webdunia
webdunia

KSRTC ಬಸ್ ಗಳಲ್ಲಿ ಟಿಕೆಟ್ ಪಡೆಯಲು ಬರಲಿದೆ ಎಟಿಎಂ ಮಾದರಿಯ ಇಟಿಎಂ

KSRTC

geetha

bangalore , ಮಂಗಳವಾರ, 9 ಜನವರಿ 2024 (21:10 IST)
KSRTC ಬಸ್ ಗಳಲ್ಲಿ ಟಿಕೆಟ್ ಪಡೆಯಲು ಎಟಿಎಂ ಮಾದರಿಯ ಇಟಿಎಂ ಮಷಿನ್ ಇರಲಿದೆ.ಅಲ್ಲದೇ ಯಪಿಐ, ಡೆಬಿಟ್, ಕ್ರೆಡಿಟ್ ಕಾರ್ಡ್ ಬಳಸಿ ಟಿಕೆಟ್ ಖರೀದಿಸುವ ಅವಕಾಶ ಇದೆ.ಎಲ್ಲಿಂದ ಎಲ್ಲಿಗೆ ಎಂದು ಟಚ್ ಸ್ಕ್ರೀನ್ ಮೇಲೆ ನಮೂದಿಸಿ ಟಿಕೆಟ್ ಖರೀದಿಗೆ ಅವಕಾಶವಿದೆ.ಈಗಾಗಲೇ BMTCಯಲ್ಲಿ ಜಾರಿಯಾಗಿರೋ ಇಟಿಎಂ KSRTCಯಲ್ಲೂ ಜಾರಿಯಾಗಲಿದೆ.
 
ಮೊದಲ ಹಂತದಲ್ಲಿ 10,500 ಇಟಿಎಂ ಖರೀದಿಗೆ KSRTC ಮುಂದಾಗಿದೆ.ಮೊದಲಿಗೆ 12 ನಗರಗಳಲ್ಲಿ ಇಟಿಎಂ ಅಳವಡಿಸಲು ತೀರ್ಮಾನ ಮಾಡಲಾಗಿದೆ.ಬೆಂಗಳೂರು ರಾಮನಗರ ಮಂಡ್ಯ ಮೈಸೂರು ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ ತುಮಕೂರು ಹಾಗೂ ಹಾಸನ ಮಂಗಳೂರು ದಾವಣಗೆರೆ ಶಿವಮೊಗದಲ್ಲಿ ಇಟಿಎಂ ಅನುಷ್ಠಾನವಾಗಲಿದೆ.ಕಂಡಕ್ಟರ್ ಮೇಲಿನ ಹೊರೆ ತಗ್ಗುವ‌ ಜೊತೆಗೆ ಚಿಲ್ಲರೆ ಸಮಸ್ಯೆಯೂ ಪರಿಹಾರ ಆಗಲಿದೆ.KSRTC ಬಸ್ಸುಗಳ ಎಲ್ಲಿ‌ಬರ್ತಿವೆ, ಹೋಗ್ತಿವೆ ಮಾಹಿತಿಯೂ ಇಟಿಎಂನಲ್ಲಿ ಲಭ್ಯ ಇರಲಿದೆ.ಇಟಿಎಂಗೆ KSRTC ಬಸ್ಸುಗಳ ಜಿಪಿಆರ್ ಎಸ್ ಜಾಲ ಅಳವಡಿಸಿ ಬಸ್ಸುಗಳ ಮಾಹಿತಿ ಒದಗಿಸಲು ನಿರ್ಧಾರ ಮಾಡಲಾಗಿದೆ.ಇಟಿಎಂ ಖರೀದಿಗಾಗಿ ಟೆಂಡರ್ ಕರೆಯಲು KSRTC ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಬೇಜವಾಬ್ದಾರಿ ಸರ್ಕಾರ ಇದೆ-ಅಶೋಕ್