Publish Date: Wed, 10 Jan 2024 (10:20 IST)
Updated Date: Wed, 10 Jan 2024 (10:37 IST)
ಬೆಂಗಳೂರು: ಗಂಡನ ಮೇಲಿನ ಸಿಟ್ಟಿಗೆ ಮಗನನ್ನೇ ಕೊಂದ ಬೆಂಗಳೂರು ಮೂಲದ ಸುಚನಾ ಬಗ್ಗೆ ಶಾಕಿಂಗ್ ಸುದ್ದಿಗಳು ಹೊರಬೀಳುತ್ತಿದೆ.
ಗೋವಾಗೆ ಪ್ರವಾಶ ತೆರಳಿದ್ದಾಗ ತನ್ನ ನಾಲ್ಕು ವರ್ಷದ ಮಗನನ್ನು ಕೊಲೆ ಮಾಡಿದ್ದ ಸುಚನಾ ಮೃತದೇಹವನ್ನು ಬ್ಯಾಗ್ ನಲ್ಲಿ ಪ್ಯಾಕ್ ಮಾಡಿ ಕಾರು ಮೂಲಕ ಬೆಂಗಳೂರಿಗೆ ಪ್ರಯಾನಿಸಿದ್ದರು. ಆದರೆ ಹೋಟೆಲ್ ರೂಂನಲ್ಲಿ ರಕ್ತ ಕಲೆ ಕಂಡು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರಿಂದ ಪೊಲೀಸರು ಕಾರು ಪತ್ತೆ ಮಾಡಿ ಸುಚನಾರನ್ನು ಬಂಧಿಸಿದ್ದರು.
ಈ ವೇಳೆ ದಾಂಪತ್ಯ ವಿರಸದಿಂದಾಗಿ ಬೇರೆಯಾಗಿದ್ದ ಗಂಡನಿಗೆ ಪ್ರತಿ ವಾರ ಕೋರ್ಟ್ ಆದೇಶದಂತೆ ವಿಡಿಯೋ ಕಾಲ್ ಮಾಡಿ ಮಗನನ್ನು ತೋರಿಸಬೇಕಿತ್ತು ಎಂಬ ಕಾರಣಕ್ಕೆ ಅಸಮಾಧಾನ ಹೊಂದಿದ್ದ ಸುಚನಾ ಮಗನನ್ನು ಕೊಲೆ ಮಾಡಿದ್ದಾಗಿ ಬಾಯ್ಬಿಟ್ಟಿದ್ದಳು.
ಇದೀಗ ಮಗುವಿನ ಮೃತದೇಹದ ಪೋಸ್ಟ್ ಮಾರ್ಟಂ ಮಾಡಲಾಗಿದ್ದು ಆಕೆ ಮಗುವನ್ನು ಕೊಲೆ ಮಾಡಿದ್ದು ಹೇಗೆ ಎಂಬುದು ನಿಖರವಾಗಿ ಗೊತ್ತಾಗಿದೆ. ಆಕೆ ಮೃತದೇಹದ ಸಮೇತ ಸಿಕ್ಕಿ ಬೀಳುವ 36 ಗಂಟೆಗಳ ಮೊದಲೇ ಕೊಲೆ ಮಾಡಲಾಗಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ.
ಮಗುವನ್ನು ತಲೆದಿಂಬು ಅಥವಾ ಬಟ್ಟೆ ಬಳಸಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ಉಸಿರುಗಟ್ಟಲು ಕೈ ಬಳಸಿಲ್ಲ. ಸಾವಿನ ನಂತರ ದೇಹ ಮರಗಟ್ಟುವಿಕೆ ಗಮನಿಸಿ 36 ಗಂಟೆಗಳ ಮೊದಲು ಕೊಲೆಯಾಗಿರಬಹುದು ಎಂದು ಅಂದಾಜಿಸಲಾಗಿದೆ ಎಂದು ವೈದ್ಯಕೀಯ ವರದಿಯಲ್ಲಿ ಹೇಳಲಾಗಿದೆ.