Publish Date: Tue, 09 Jan 2024 (19:45 IST)
Updated Date: Tue, 09 Jan 2024 (19:36 IST)
ಕಳ್ಳತನ ಪ್ರಕರಣದ ಹಿನ್ನೆಲೆಯಲ್ಲಿ ವಿಚಾರಣೆಗೆ ಹೋದ ಪೊಲೀಸರ ಮೇಲೆ ಆರೋಪಿಗಳು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಬಳಗಾನೂರು ಪೊಲೀಸ್ ಠಾಣೆಯ ಇಬ್ಬರು ಪೊಲೀಸರು, ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿಚಾರಣೆ ನಡೆಸಲು ಹಸ್ಮಕಲ್ ಗ್ರಾಮಕ್ಕೆ ತೆರಳಿದ್ದರು. ಮಸ್ಕಿ ತಾಲೂಕಿನ ಹಸ್ಮಕಲ್ ಗ್ರಾಮದ ಮೋಡೆಕಾರ ದುರುಗಪ್ಪ ಎಂಬ ಆರೋಪಿಯನ್ನು ವಿಚಾರಣ ನಡೆಸಲು ಮುಂದಾದಾಗ ಮೋಡೇಕಾರ ದುರುಗಪ್ಪ ಮತ್ತಿತ್ತರು ಪೊಲೀಸರ ಜತೆ ಮಾತಿನ ಚಕಮಕಿ ನಡೆಸಿ,. ಹಲ್ಲೆ ನಡೆಸಿದ್ದಾರೆ.
ಗುಂಪು ಹಲ್ಲೆಗೆ ಮುಂದಾಗುತ್ತಿದ್ದಂತೆ ಗೋಪಾಲ ಎನ್ನುವ ಪೇದೆ ಸ್ಥಳದಿಂದ ಓಡಿ ಹೋಗಿದ್ದು, ಉದ್ರಿಕ್ತರು ಕೈಗೆ ಸಿಕ್ಕಿದ ಮಂಜುನಾಥ ಎಂಬುವರಿಗೆ ಹಿಗ್ಗಾಮುಗ್ಗ ಥಳಿಸಿದೆ. ತೀವ್ರವಾಗಿ ಗಾಯಗೊಂಡಿರುವ ಮಂಜುನಾಥ ಅವರನ್ನು ಸಿಂಧನೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರ ಮೇಲೆ ಹಲ್ಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಮೋಡೆಕಾರ ದುರುಗಪ್ಪ ಮತ್ತಿತರರ ಮೇಲೆ ಬಳಗಾನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.