ಬೆಂಗಳೂರು-ಬೆಂಗಳೂರು ನಗರದ ಮ್ಯೂಸಿಯಮ್ಗಳಿಗೆ ಬಾಂಬ್ ಬೆದರಿಕೆ ಇಮೇಲ್ ಬಂದಿದ್ದ ಪ್ರಕರಣದ ತನಿಖೆಯಲ್ಲಿ ಪೊಲೀಸರಿಗೆ ಮಹತ್ವದ ವಿಚಾರವೊಂದು ತಿಳಿದುಬಂದಿದೆ. ದುಷ್ಕರ್ಮಿಗಳು ವಿಪಿಎನ್ ಬಳಸಿ ಇಮೇಲ್ ಮಾಡಿರುವುದು ಪೊಲೀಸರಿಗೆ ತಿಳಿದಿದೆ. ದುಷ್ಕರ್ಮಿಗಳು ಗೂಗಲ್ ಇ-ಮೇಲ್ ವೆಬ್ ಬಳಸಿಯೇ ಮೇಲ್ ಮಾಡಿದ್ದಾರೆ. ಆದರೆ ನೆಟ್ವರ್ಕ್ ಮಾತ್ರ ವಿಪಿಎನ್ ಬಳಸಿದ್ದಾರೆ. ಹೀಗಾಗಿ ಕೇಂದ್ರ ವಿಭಾಗದ ಪೊಲೀಸರಿಂದ ತನಿಖೆ ಮುಂದುವರೆದಿದೆ.
ವಿಪಿಎನ್ ನೆಟ್ವರ್ಕ್ ಬಳಸಿಕೊಂಡರೇ ಐಪಿ ಅಡ್ರೆಸ್ ಟ್ರೇಸ್ ಮಾಡುವುದು ಕಷ್ಟವಾಗುತ್ತದೆ. ಸಾಧಾರಣವಾಗಿ ಇಂತಹ ಪ್ರಕರಣಗಳಲ್ಲಿ ಐಪಿ ಅಡ್ರೆಸ್ ಟ್ರೇಸ್ ಮಾಡಲು ಕಷ್ಟವಾಗುತ್ತದೆ. ಬೇರೆ ಬೇರೆ ದೇಶಗಳಿಂದ ಮೇಲ್ ಬಂದಿರುವ ಹಾಗೆ ಐಪಿ ಅಡ್ರೆಸ್ ತೋರಿಸುತ್ತದೆ. ಈ ಪ್ರಕರಣದಲ್ಲಿ ಐಪಿ ಅಡ್ರೆಸ್ ಮೂರು ದೇಶದ ಲೊಕೇಷನ್ಗಳನ್ನು ತೋರಿಸುತ್ತಿದೆ. ಇದರಿಂದ ಪೊಲೀಸರಿಗೆ ತಲೆನೋವಾಗಿದೆ. ಆದರೆ ಅದರ ಸರಿಯಾದ ಐಪಿ ಅಡ್ರೆಸ್ ಹುಡುಕಲು ಕಾಲಾವಕಾಶ ಬೇಕು.