Select Your Language

Notifications

webdunia
webdunia
webdunia
webdunia

ಹೊಸ ವರ್ಷಕ್ಕೆ ನಂದಿಬೆಟ್ಟಕ್ಕೆ ಹೋಗುವ ಪ್ಲ್ಯಾನ್ ಇದೆಯಾ? ಹಾಗಿದ್ದರೆ ನಿಮಗೆ ನಿರಾಸೆ ಖಂಡಿತಾ

ಹೊಸ ವರ್ಷಕ್ಕೆ ನಂದಿಬೆಟ್ಟಕ್ಕೆ ಹೋಗುವ ಪ್ಲ್ಯಾನ್ ಇದೆಯಾ? ಹಾಗಿದ್ದರೆ ನಿಮಗೆ ನಿರಾಸೆ ಖಂಡಿತಾ
ಬೆಂಗಳೂರು , ಬುಧವಾರ, 27 ಡಿಸೆಂಬರ್ 2023 (08:45 IST)
WD
ಬೆಂಗಳೂರು: ಬೆಂಗಳೂರಿಗರು ಹೊಸ ವರ್ಷಾಚರಣೆ ಆಚರಿಸಲು ಸೂಕ್ತವಾದ ಜಾಗ ಹುಡುಕಾಡುತ್ತಿರಬಹುದು. ಹೆಚ್ಚಿನವರಿಗೆ ಇಷ್ಟವಾದ ತಾಣವೆಂದರೆ ನಂದಿಬೆಟ್ಟ.

ಆದರೆ ಹೊಸ ವರ್ಷವನ್ನು ನಂದಿಬೆಟ್ಟದಲ್ಲಿ ಆಚರಿಸಲು ನೀವು ಪ್ಲ್ಯಾನ್ ಮಾಡಿಕೊಂಡಿದ್ದರೆ ನಿಮಗೆ ನಿರಾಸೆಯಾಗಬಹುದು. ಯಾಕೆಂದರೆ ನಂದಿಬೆಟ್ಟ ಹೊಸ ವರ್ಷದಂದು ಪ್ರವಾಸಿಗರಿಗೆ ಬಂದ್ ಆಗಿರಲಿದೆ.

ಡಿಸೆಂಬರ್ 31 ರ ಸಂಜೆ 6 ರಿಂದ ಜನವರಿ 1 ರ ಬೆಳಿಗ್ಗೆ 6 ರವರೆಗೆ ನಂದಿಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಿ  ಚಿಕ್ಕಬಳ್ಳಾಪುರ ಡಿಸಿ ಆದೇಶ ಹೊರಡಿಸಿದ್ದಾರೆ. ಹೊಸ ವರ್ಷಾಚರಣೆ ನೆಪದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.

ಕಳೆದ ವರ್ಷವೂ ಹೊಸ ವರ್ಷಾಚರಣೆ ಸಂದರ್ಭದಲ್ಲಿ ನಂದಿಬೆಟ್ಟಕ್ಕೆ ಪ್ರವೇಶ ನಿರಾಕರಿಸಲಾಗಿತ್ತು. ಈ ವರ್ಷವೂ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಪ್ರವೇಶ ನಿರ್ಬಂಧಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅನ್ನವಿಲ್ಲ ಶಬರಿಮಲೆಗೆ ಬರಬೇಡಿ-ಕನ್ನಡಿಗರ ಆಕ್ರೋಶ