Select Your Language

Notifications

webdunia
webdunia
webdunia
webdunia

ವೇಶ್ಯಾವಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು

ವೇಶ್ಯಾವಟಿಕೆ
ಬೆಂಗಳೂರು-ಮುಂದುವರೆದ ಭಾಗವಾಗಿ ಹಲಸೂರು ಹಾಗೂ ಬೈಯಪ್ಪನಹಳ್ಳಿ ಪೊಲೀಸರಿಂದ ವೇಶ್ಯಾವಟಿಕೆ ಅಡ್ಡೆ ಮೇಲೆ ದಾಳಿ ನಡೆಸಲಾಗಿದೆ.ಖಾಸಗಿ ಹೋಟೆಲ್‌ಗಳಲ್ಲಿ ವಿದೇಶಿ ಹುಡುಗಿಯರನ್ನು ಕರೆಸಿ ವೇಶ್ಯಾವಾಟಿಕೆ ನಡೆಸ್ತಿದ್ರು.ವೇಶ್ಯಾವಾಟಿಕೆಗೆ ಕರೆತಂದಿದ್ದ ಐವರು ವಿದೇಶಿ ಮಹಿಳೆಯರ ರಕ್ಷಣೆ ಮಾಡಲಾಗಿದೆ.ರಕ್ಷಣೆ ಮಾಡಿದ ಮಹಿಳೆಯರನ್ನು FRRO ಅಧಿಕಾರಿಗಳ ಮುಂದೆ ಹಾಜರು ಪಡಿಸಲಾಗಿದೆ.ಬೆಂಗಳೂರು, ಜೈಪುರ, ಚೆನ್ನೈ, ಮೈಸೂರು, ದೆಹಲಿ, ಉದಯ್ ಪುರ, ಮುಂಬೈ ಮುಂತಾದ ಕಡೆಗಳಲ್ಲಿ ಏಜೆಂಟ್ ಗಳನ್ನು ಇಟ್ಟುಕೊಂಡಿದ್ದರು.

ಏಜೆಂಟ್ ಗಳ ಮೂಲಕ ವಿದೇಶಿ ಮಹಿಳೆಯರಿಗೆ ಗಾಳ ಹಾಕ್ತಾ ಇದ್ದರು.ಹೆಚ್ಚಿನ ಹಣದ ಆಮೀಷವನ್ನು ತೋರಿಸಿ ದಂಧೆಗೆ ಕರೆಸಿಕೊಳ್ತಾ ಇದ್ದರು.ಟೆಲಿಗ್ರಾಂ ಹಾಗೂ ವಾಟ್ಸಪ್ ಮೂಲಕ ಆನ್ ಲೈನ್ ನಲ್ಲಿ ಕಸ್ಟಮರ್ ಗಳ ಸೆಳೆಯುತ್ತಿದ್ದರು.ಮೂವರು ವಿದೇಶಿ ಮಹಿಳೆಯರನ್ನು ತೀವ್ರ ವಿಚಾರಣೆ ಪೊಲೀಸರು ಮಾಡ್ತಿದ್ರು.ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನಿಂದ ಬಿಬಿಎಂಪಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ