Select Your Language

Notifications

webdunia
webdunia
webdunia
webdunia

ಆಟೋ ಕಳ್ಳರ ಬಂಧನ ಮಾಡಿದ ಗಿರಿನಗರ ಪೊಲೀಸರು

ಆಟೋ ಕಳ್ಳರ ಬಂಧನ ಮಾಡಿದ ಗಿರಿನಗರ ಪೊಲೀಸರು
bangalore , ಮಂಗಳವಾರ, 2 ಜನವರಿ 2024 (14:21 IST)
ಮಗನ ಸ್ನೇಹಿತನ ಜೊತೆ ಸೇರಿ ಕಳ್ಳತನ ಮಾಡ್ತಿದ್ದ ಆಸಾಮಿ ಸೇರಿ ಇಬ್ಬರ ಬಂಧನ ಮಾಡಲಾಗಿದೆ.ಸೈಯದ್ ನದೀಮ್, ಜಾವೀದ್ ಬಂಧಿತ ಆರೋಪಿಗಳಾಗಿದ್ದು,ಈ ಹಿಂದೆ ಮೈಸೂರಿನಲ್ಲಿ ಆಟೋ ಡೀಲರ್ ಜಾವೀದ್  ಆಗಿದ್ದ.ಸಾಲ ಮಾಡಿಕೊಂಡು ಮೈಸೂರು ಬಿಟ್ಟು ಬೆಂಗಳೂರಿಗೆ ಜಾವೀದ್ ಆಟೋ ಚಾಲಕನಾಗಿದ್ದ .ಈ ವೇಳೆ ಮಗನ ಸ್ನೇಹಿತ ಸೈಯದ್ ನದೀಮ್ ನನ್ನ ಜಾವೀದ್ ಪರಿಚಯ ಮಾಡಿಕೊಂಡಿದ್ದ,

ಕಳ್ಳತನ ಮಾಡಿದ್ರೆ ಒಳ್ಳೆ ಜೀವನ ನಡೆಸಬಹುದು ಎಂದು   ನದೀಮ್ ಗೆ ತಲೆ ಕೆಡಿಸಿದ್ದ.ರಾತ್ರಿ ರಸ್ತೆ ಬದಿ ನಿಲ್ಲಿಸಿದ್ದ ಆಟೋಗಳನ್ನ ಕಳ್ಳತನ ಮಾಡುತ್ತಿದ್ದರು.ಹೀಗೆ ಮೂರು ಆಟೋಗಳನ್ನ ಕದ್ದು ನಂಬರ್ ಪ್ಲೇಟ್ ಬದಲಾಯಿಸಿ ಮಾರಾಟ ಮಾಡಿದ್ದರು.ಸದ್ಯ ಸಿಸಿಟಿವಿ ದೃಶ್ಯಗಳನ್ನ ಆಧರಿಸಿ ಕಳ್ಳರನ್ನ ಪೊಲೀಸರು ಬಂಧಿಸಿದ್ದಾರೆ.ಆರೋಪಿಗಳಿಂದ 7.50 ಲಕ್ಷ ಮೌಲ್ಯದ ಮೂರು ಆಟೋಗಳನ್ನ ವಶಕ್ಕೆ ಪಡೆದಿದ್ದಾರೆ.ಇಬ್ಬರು ಕಳ್ಳರನ್ನ ಗಿರಿನಗರ ಪೊಲೀಸರು ಜೈಲಿಗಟ್ಟಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಸುಲಿಗೆಗೆ ಪ್ಲಾನ್ ಮಾಡಿದ್ದ ಆರು ಜನರನ್ನ ವಶಪಡೆದ ಸಿಸಿಬಿ ಪೊಲೀಸರು