Select Your Language

Notifications

webdunia
webdunia
webdunia
webdunia

ಅಯೋಧ್ಯೆಯಲ್ಲಿ ತಲೆ ಎತ್ತಲಿದೆ ಕರ್ನಾಟಕದ ಅತಿಥಿ ಗೃಹ

Ayodhya

Krishnaveni K

ಬೆಂಗಳೂರು , ಬುಧವಾರ, 10 ಜನವರಿ 2024 (11:39 IST)
ಬೆಂಗಳೂರು: ಅಯೋಧ‍್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಯಾಗುತ್ತಿದ್ದಂತೇ ಕರ್ನಾಟಕದಿಂದಲೂ ಅನೇಕರು ರಾಮನ ನಾಡಿಗೆ ತೆರಳಲು ಯೋಜನೆ ಹಾಕಿಕೊಂಡಿದ್ದಾರೆ.

ಇದೀಗ ಅಯೋಧ್ಯೆಗೆ ತೆರಳುವ ಕರ್ನಾಟಕ ಯಾತ್ರಿಗಳಿಗೆ ರಾಜ್ಯ ಸರ್ಕಾರ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ. ಅಯೋಧ‍್ಯೆಯಲ್ಲಿ ಕರ್ನಾಟಕ ಯಾತ್ರಿ ನಿವಾಸ ನಿರ್ಮಿಸಲು ಸ್ಥಳಾವಕಾಶ ನೀಡುವಂತೆ ಮುಜರಾಯಿ ಇಲಾಖೆ ಉತ್ತರ ಪ್ರದೇಶಕ್ಕೆ ಮನವಿ ಮಾಡಿದೆ.

ಕರ್ನಾಟಕದಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಯೋಧ್ಯೆಗೆ ತೆರಳುವ ಸಾಧ‍್ಯತೆಯಿದೆ. ಹೀಗಾಗಿ ಕನ್ನಡಿಗರಿಗೆ ಅಲ್ಲಿ ವಸತಿ ಸೌಕರ್ಯ ಕಲ್ಪಿಸುವ ಉದ್ದೇಶದಿಂದ ಅತಿಥಿ ಗೃಹ ನಿರ್ಮಿಸಲು ಮುಜರಾಯಿ ಇಲಾಖೆ ಕ್ರಮಕ್ಕೆ ಮುಂದಾಗಿದೆ.

ಈಗಾಗಲೇ ಉತ್ತರ ಪ್ರದೇಶ ಸರ್ಕಾರಕ್ಕೆ ಪತ್ರ ಬರೆದು ಮನವಿ ನೀಡಲಾಗಿದೆ. 10 ಕೋಟಿ ರೂ. ವೆಚ್ಚದಲ್ಲಿ 5 ಎಕರೆ ಜಾಗದಲ್ಲಿ ಅತಿಥಿ ಗೃಹ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಉತ್ತರ ಪ್ರದೇಶ ಸರ್ಕಾರದಿಂದ ಹಸಿರು ನಿಶಾನೆ ಸಿಕ್ಕರೆ ಅತಿಥಿ ಗೃಹ ನಿರ್ಮಾಣವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸುಚನಾ ಮಗನನ್ನು ಕೊಂದಿದ್ದು ಹೇಗೆ? ಪೋಸ್ಟ್ ಮಾರ್ಟಂ ವರದಿ ಬಹಿರಂಗ