Select Your Language

Notifications

webdunia
webdunia
webdunia
webdunia

ಶ್ರೀರಾಮ ಮಾಂಸಾಹಾರಿ: ಎನ್ ಸಿಪಿ ನಾಯಕ ಜಿತೇಂದ್ರ ವಿವಾದಾತ್ಮಕ ಹೇಳಿಕೆ

ಶ್ರೀರಾಮ ಮಾಂಸಾಹಾರಿ: ಎನ್ ಸಿಪಿ ನಾಯಕ ಜಿತೇಂದ್ರ ವಿವಾದಾತ್ಮಕ ಹೇಳಿಕೆ
ಬೆಂಗಳೂರು , ಗುರುವಾರ, 4 ಜನವರಿ 2024 (11:00 IST)
ಬೆಂಗಳೂರು: ಅಯೋಧ‍್ಯೆ ರಾಮಮಂದಿರ ಲೋಕಾರ್ಪಣೆಗೆ ಕೆಲವೇ ದಿನಗಳು ಬಾಕಿಯಿರುವಾಗ ಮಹಾರಾಷ್ಟ್ರದ ಎನ್ ಸಿಪಿ ಪಕ್ಷದ ನಾಯಕ ಜಿತೇಂದ್ರ ಅಹ್ವಾದ್ ಪ್ರಭು ಶ್ರೀರಾಮಚಂದ್ರನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಶ್ರೀರಾಮಚಂದ್ರ ಮಾಂಸಾಹಾರಿ. ಇಲ್ಲದೇ ಹೋಗಿದ್ದರೆ 14 ವರ್ಷ ಆತ ಹೇಗೆ ಕಾಡಿನಲ್ಲಿ ಜೀವನ ಮಾಡುತ್ತಿದ್ದ ಎಂದು ಜಿತೇಂದ್ರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

‘ನಾವು ಇತಿಹಾಸವನ್ನು ಸರಿಯಾಗಿ ಓದುವುದೇ ಇಲ್ಲ ಮತ್ತು ರಾಜಕೀಯಕ್ಕಾಗಿ ಎಲ್ಲಾ ಮರೆತುಬಿಡುತ್ತೇವೆ. ರಾಮ ನಮ್ಮವನು. ನಮ್ಮಂತೆ ಬಹುಜನ. ಅವನು ಆಹಾರಕ್ಕಾಗಿ ಬೇಟೆಯಾಡುತ್ತಿದ್ದ. ರಾಮ ಯಾವತ್ತೂ ಸಸ್ಯಾಹಾರಿಯಾಗಿರಲಿಲ್ಲ. ಆತ ಮಾಂಸಾಹಾರಿ. ಇಲ್ಲದೇ ಹೋದರೆ ಸಸ್ಯಾಹಾರಿಯಾಗಿದ್ದುಕೊಂಡು ಒಬ್ಬ ವ್ಯಕ್ತಿ ಕಾಡಿನಲ್ಲಿ 14 ವರ್ಷ ಹೇಗೆ ಜೀವನ ಮಾಡಲು ಸಾಧ‍್ಯ?'’ ಎಂದಿದ್ದಾರೆ.

ಅವರ ಹೇಳಿಕೆ ವಿವಾದವಾಗುತ್ತಿದ್ದಂತೇ ಮತ್ತೆ ಪ್ರತಿಕ್ರಿಯಿಸಿದ್ದು, ‘ಕೆಲವರು ರಾಮ ಮೆಂತೆ ಬಾತ್ ತಿನ್ನುತ್ತಿದ್ದ ಎನ್ನುತ್ತಾರೆ. ಆದರೆ ಆ ಕಾಲದಲ್ಲಿ ಅಕ್ಕಿಯೇ ಇರಲಿಲ್ಲ. ಪ್ರಭು ರಾಮ ಕ್ಷತ್ರಿಯ. ಕ್ಷತ್ರಿಯರಾದವರು ಮಾಂಸಾಹಾರಿಗಳು. ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ. ಇದರಲ್ಲಿ ವಿವಾದವಾಗುವಂತದ್ದು ಏನೂ ಇಲ್ಲ. ಶೇ.80 ರಷ್ಟು ಜನ ಮಾಂಸಾಹಾರಿಗಳು, ಅವರೆಲ್ಲರೂ ರಾಮನನ್ನು ಪೂಜಿಸುತ್ತಾರೆ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Arvind Kejriwal: ದೆಹಲಿ ಸಿಎಂ ಕೇಜ್ರಿವಾಲ್ ಇಂದು ಅರೆಸ್ಟ್?