Publish Date: Wed, 10 Jan 2024 (14:01 IST)
Updated Date: Wed, 10 Jan 2024 (12:04 IST)
ಬೆಂಗಳೂರು-ಕೋಲಾರ ಲೋಕಸಭಾ ಕ್ಷೇತ್ರದ ಸಭೆ ವಿಚಾರವಾಗಿ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.ಕೆಲವೇ ತಿಂಗಳಲ್ಲಿ ಲೋಕಸಭಾ ಚುನಾವಣೆ ಬರ್ತಿದೆ .ಇವತ್ತು ಕೋಲಾರ ಕ್ಷೇತ್ರದ ಚುನಾವಣೆ ಸಿದ್ದತೆ ಬಗ್ಗೆ ಶಾಸಕರು,ಮಾಜಿ ಶಾಸಕರು ಮುಖಂಡರ ಜೊತೆ ಸಭೆ ನಡೆಸ್ತಿದ್ದೇವೆ.
ಕೋಲಾರ ಕ್ಷೇತ್ರಕ್ಕೆ ಹಲವು ಆಕಾಂಕ್ಷಿಗಳ ಹೆಸರು ಚರ್ಚೆ ಆಗ್ತಿದೆ ಎಂಬ ವಿಚಾರವಾಗಿ ಆ ವಿಚಾರ ಚರ್ಚೆ ಮಾಡೋದಕ್ಕೆ ಸಭೆ ಕರೆದಿರೋದು.ಇವತ್ತು ಸಂಭಾವ್ಯ ಅಭ್ಯರ್ಥಿಗಳು ಯಾರು ಆಗಬೇಕು.ಅಲ್ಲಿನ ಮುಖಂಡರ ಅಭಿಪ್ರಾಯ ಕೇಳಲು ಸಭೆ ಕರೆದಿದ್ದೇವೆ ಜೊತೆಗೆ ಅಲ್ಲಿನ ಜನತೆ ಅಭಿಪ್ರಾಯ ಹಾಗೂ ಗ್ರೌಂಡ್ ರಿಯಾಲಿಟಿ ಬಗ್ಗೆ ಪಕ್ಷ ಮಾಹಿತಿ ಕಲೆಹಾಕ್ತಿದೆ.ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಚರ್ಚೆ ಮಾಡ್ತೀವಿ.ನಮ್ಮಗೆ ಸಿಗುವ ಸ್ಥಾನಗಳಲ್ಲಿ ಎಲ್ಲಾ ಗೆಲ್ಲಬೇಕು.ದೇವೇಗೌಡರು ತೆಗದುಕೊಂಡ ಎನ್ ಡಿ ಎ ಜೊತೆಗೆ ಸಂಬಂಧ ಒಳ್ಳೆ ಉದ್ಧೇಶದಿಂದ ನಿರ್ಧಾರ ತೆಗದುಕೊಂಡಿದ್ದಾರೆ.
ನರೇಂದ್ರ ಮೋದಿಯವರು ದೇವೇಗೌಡರಿಗೆ ಕೊಡುವ ಗೌರವನ್ನ ನಾವೆಲ್ಲಾ ಕಂಡಿದ್ದೇವೆ.ನಮ್ಮನ್ನ ಅತ್ಯಂತ ಗೌರವದಿಂದ ನಡೆಸಿಕೊಂಡಿದ್ದಾರೆ.ಹಾಗಾಗಿ ಒಳ್ಳೆ ಉದ್ದೇಶದಿಂದ ಕೈ ಜೋಡಿಸಿದ್ದೇವೆ.೨೮ ಕ್ಷೇತ್ರಗಳಲ್ಲೂ ಬಿಜೆಪಿ ಜೆಡಿಎಸ್ ಅಣ್ಣತಮ್ಮಂದಿರಂತೆ ದುಡಿದು ಗೆಲ್ಲಬೇಕು.ಪ್ರಾಮಾಣಿಕವಾಗಿ ಕೆಲಸ ಮಾಡಲು ಜನರು ಶಕ್ತಿ ತುಂಬಿಸ್ತಾರೆ ಎಂಬ ನಿರೀಕ್ಷೆ ನಮ್ಮಗೆ ಇದೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.