Select Your Language

Notifications

webdunia
webdunia
webdunia
webdunia

‘ಜೆ.ಎನ್.ಯು ಕೇಸ್ ನಲ್ಲಿ ರಾಜಕೀಯ ಸೇರಿಸ್ತಿರೋ ಕಾಂಗ್ರೆಸ್’

‘ಜೆ.ಎನ್.ಯು ಕೇಸ್ ನಲ್ಲಿ ರಾಜಕೀಯ ಸೇರಿಸ್ತಿರೋ ಕಾಂಗ್ರೆಸ್’
ಹುಬ್ಬಳ್ಳಿ , ಸೋಮವಾರ, 6 ಜನವರಿ 2020 (14:40 IST)
ಜೆ.ಎನ್.ಯು ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ಆ ಜಗಳದಲ್ಲಿ ಕಾಂಗ್ರೆಸ್ ರಾಜಕೀಯ ಬೆರೆಸುತ್ತಿದೆ.

ಜೆ.ಎನ್.ಯು ನಲ್ಲಿ ನಡೆದ ಜಗಳಕ್ಕೆ ರಾಜಕಾರಣ ಬೆರೆಸುತ್ತಿರುವುದು ಕಾಂಗ್ರೆಸ್ ನ ಅತ್ಯಂತ ಕ್ಷುಲ್ಲಕ ಮನೋಭಾವ ತೋರಿಸುತ್ತಿದೆ. ಹೀಗಂತ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ದೂರಿದ್ದಾರೆ.

ಜೆ.ಎನ್.ಯುನಲ್ಲಿ ನಡೆದ ಘಟನೆಯ ಕುರಿತು ಪ್ರತಿಕ್ರಿಯೆ ನೀಡಿದ್ದು, ಈ ಪ್ರಕರಣವನ್ನು ಬಿಜೆಪಿ ತೀವ್ರವಾಗಿ ಖಂಸಿಸುತ್ತದೆ. ಬಿಜೆಪಿಯು ಈ ಘಟನೆಯ ಬಗ್ಗೆ ತನಿಖೆ ಕೈಗೊಳ್ಳಲು ಸೂಚಿಸುತ್ತದೆ ಎಂದರು.

ಜೆ.ಎನ್.ಯು ನಲ್ಲಿ ನಡೆಯುತ್ತಿರುವ ಉಳಿದ ಘಟನೆ ಬಗ್ಗೆ ಸಮಾಜ ಹಾಗೂ ಮಾಧ್ಯಮ ಜಾಗೃತಿ ಮೂಡಿಸಬೇಕಿದೆ. ಜೆಎನ್ ಯು ನಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ನನಗೆ ಬಂದಿರುವ ಮಾಹಿತಿ ಪ್ರಕಾರ ಎರಡು ಗುಂಪುಗಳು ನಡುವೆ ನಡೆದ ಜಗಳ ಇದಾಗಿದ್ದು, ಇದರಲ್ಲಿ ಯಾವುದೇ ರಾಜಕಾರಣವಿಲ್ಲ ಎಂದರು. 

ಸುಳ್ಳು ಹೇಳಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ. ಈ ಘಟನೆ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಪ್ರಲ್ಹಾದ ಜೋಶಿ ಹೇಳಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಇಸ್ಕಾನ್‌ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಸಂಭ್ರಮ