Publish Date: Mon, 06 Jan 2020 (14:34 IST)
Updated Date: Mon, 06 Jan 2020 (14:36 IST)
ಇಸ್ಕಾನ್ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಸಡಗರ ಮನೆಮಾಡಿದೆ.
ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಹುಬ್ಬಳ್ಳಿ- ಧಾರವಾಡ ಇಸ್ಕಾನ್ ವತಿಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು.
ರಾಯಾಪುರದ ಇಸ್ಕಾನ್ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಸಂಭ್ರಮ ಮಾಡಿದ್ದು, ಸ್ವರ್ಣ ಬಣ್ಣ ಲೇಪಿತ ಭವ್ಯ ವೈಕುಂಠ ದ್ವಾರ ಪ್ರತಿಷ್ಠಾಪಣೆ ಮಾಡಿದ್ದಾರೆ. ಬಣ್ಣ ಬಣ್ಣದ ಸುಗಂಧಿತ ಪುಷ್ಪಗಳಿಂದ ಶೃಂಗಾರ, ಭಗವಂತನ ಒಂದು ಲಕ್ಷ ನಾಮ ಜಪಿಸುವ ಲಕ್ಷಾರ್ಚನೆ ಸೇವೆ ಆಯೋಜಿಸಲಾಗಿದೆ.
ಶ್ರೀನಿವಾಸ ಗೋವಿಂದನ ಪ್ರತಿಮೆಗೆ ವಿಶೇಷ ಪೂಜೆ ಪುನಸ್ಕಾರ ನೆರವೇರಿಸಲಾಯಿತು.