Publish Date: Mon, 06 Jan 2020 (14:30 IST)
Updated Date: Mon, 06 Jan 2020 (14:32 IST)
ನಟ ಭಯಂಕರ, ಖ್ಯಾತ ಖಳನಟ ವಜ್ರಮುನಿಯವರ 14 ನೇ ಸ್ಮರಣೋತ್ಸವ ನಡೆಯಿತು.
ಮಂಡ್ಯದ ಕಿಕ್ಕೇರಿ ಸಮೀಪದ ಕಾಳೇನಹಳ್ಳಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಹಳ್ಳಿಕಾರ್ ಯುವಕರ ಸಂಘದ ವತಿಯಿಂದ ಚಿತ್ರ ನಟ ವಜ್ರಮುನಿ ಅವರ 14 ನೇ ಪುಣ್ಯ ಸ್ಮರಣೆ ಅಂಗವಾಗಿ ಗ್ರಾಮ ಘಟಕ ಉದ್ಘಾಟನಾ ಸಮಾರಂಭ ನಡೆಯಿತು.
ಜೆಡಿಎಸ್ ಯುವ ನಾಯಕ ಎ.ಬಿ ಕಿರಣ್ ಮಾತನಾಡಿ, ವಜ್ರಮುನಿಯವರು ಚಲನ ಚಿತ್ರಗಳಲ್ಲಿ ಖಳನಾಯಕನಾಗಿ ತಮ್ಮದೇ ಛಾಪು ಮೂಡಿಸಿದವರು. ನಿಜ ಜೀವನದಲ್ಲಿ ಮಾತ್ರ ಸಹೃದಯ ಮನುಷ್ಯ. ಅವರಂಥ ಮಹಾನ್ ವ್ಯಕ್ತಿಗಳ ಸಾಧನೆ ಸ್ಮರಿಸೋದು ನಮ್ಮ ಕರ್ತವ್ಯ ಎಂದರು.