Publish Date: Tue, 24 Dec 2019 (20:24 IST)
Updated Date: Tue, 24 Dec 2019 (20:27 IST)
ಆರಾಧ್ಯ ದೈವ ಯೇಸುವಿನ ಜನ್ಮದಿನವನ್ನು ಸೇವಾಲಯದಲ್ಲಿ ಸಡಗರದಿಂದ ಕ್ರಿಸ್ ಮಸ್ ಹಬ್ಬ ಆಚರಣೆ ಮಾಡಲಾಗಿದೆ.
ಬೆಳಗಾವಿ ಪ್ರಾಂತೀಯ ಸಮಾಜ ಸೇವಾ ಸಂಸ್ಥೆಯವರು ಆರಾಧ್ಯ ದೈವ ಯೇಸುವಿನ ಜನ್ಮದಿನವನ್ನು ಧಾರವಾಡದ ಸೇವಾಲಯದಲ್ಲಿ ಕ್ರಿಸ್ ಮಸ್ ಹಬ್ಬವನ್ನು ಸಡಗರದಿಂದ ಆಚರಿಸಿದರು.
ಫಾದರ್ ಡೇರಿಕ ಫರ್ನಾಂಡೀಸ್, ಸಂತ ಯೇಸುವಿನ ಹುಟ್ಟು, ಬಾಲ್ಯದ ಬದುಕು ಕುರಿತು ಸುದೀರ್ಘವಾದ ಸಂದೇಶ ನೀಡಿದರು. ಸಂಸ್ಥೆ ಸಿಬ್ಬಂದಿಗಳು ಪ್ರಾರ್ಥನೆ ಸಲ್ಲಿಸಿದ್ರು.
ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಕ್ರಿಸ್‌ಮಸ್ ಹಬ್ಬವನ್ನು ಸಡಗರ ಸಂಭ್ರಮದಿಂದ ಖುಷಿಯಿಂದ ಕೇಕ್ ಕತ್ತರಿಸಿ ಕ್ರಿಸ್ತನ ಹುಟ್ಟುಹಬ್ಬವನ್ನು ಆಚರಿಸಿದ್ರು.