Publish Date: Sat, 21 Dec 2019 (10:07 IST)
Updated Date: Sat, 21 Dec 2019 (10:09 IST)
ಕೋಲ್ಕೊತ್ತಾ: ಕ್ರಿಸ್ ಮಸ್ ಬಂತೆಂದರೆ ಸಾಂತಾ ಬಂದು ಗಿಫ್ಟ್ ಕೊಡುತ್ತಾರೆ ಎಂದು ಮಕ್ಕಳು ಕುತೂಹಲದಿಂದ ಎದುರು ನೋಡುತ್ತಾರೆ. ಆದರೆ ಸೀಕ್ರೆಟ್ ಸಾಂತಾ ಆಗಿ ತಮ್ಮ ಮೆಚ್ಚಿನ ತಾರೆಯೇ ಬಂದರೆ?
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇದೇ ರೀತಿ ಸಾಂತಾ ವೇಷ ಧರಿಸಿ ಬಂದು ಮಕ್ಕಳ ಮುಖದಲ್ಲಿ ನಗು ತಂದಿದ್ದಾರೆ. ಕೋಲ್ಕೊತ್ತಾದ ಶೆಲ್ಟರ್ ಹೋಂ ಒಂದಕ್ಕೆ ಸಾಂತಾ ವೇಷ ಧರಿಸಿ ಭೇಟಿ ನೀಡಿದ್ದ ಕೊಹ್ಲಿ ವಿಡಿಯೋವನ್ನು ಸ್ಟಾರ್ ಪ್ಲಸ್ ವಾಹಿನಿ ಪ್ರಸಾರ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಕ್ಕಳು ತಮಗೆ ಸಾಂತಾ ಏನೇನು ಗಿಫ್ಟ್ ತರಬೇಕು ಎಂದು ಆಶಿಸುತ್ತಾರೋ, ಆ ಗಿಫ್ಟ್ ಗಳನ್ನೆಲ್ಲಾ ಹಿಡಿದು ಸಾಂತಾ ವೇಷದಲ್ಲಿ ಬರುವ ಕೊಹ್ಲಿ ಮಕ್ಕಳಿಗೆಲ್ಲಾ ಗಿಫ್ಟ್ ಹಂಚುತ್ತಾರೆ. ಕೊನೆಗೆ ತಾನು ಯಾರೆಂದು ಮುಖವಾಡ ಕಳಚಿ ತೋರಿಸಿದಾಗ ಮಕ್ಕಳೆಲ್ಲಾ ಖುಷಿಯಿಂದ ಅವರನ್ನು ಓಡಿ ಹೋಗಿ ತಬ್ಬಿಕೊಳ್ಳುತ್ತಾರೆ. ಈ ಸರ್ಪ್ರೈಸ್ ಮಕ್ಕಳಿಗೆ ಮಾತ್ರವಲ್ಲ ತನಗೂ ಖುಷಿ ನೀಡಿದೆ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.