Select Your Language

Notifications

webdunia
webdunia
webdunia
webdunia

ಬೇಬಿ ಬೆಟ್ಟದಲ್ಲಿ ನಿತ್ಯವೂ ನಡೆಯುತ್ತಿದೆ ಅಂಥ ಕೆಲಸ

ಬೇಬಿ ಬೆಟ್ಟ
ಯಾರೊಬ್ಬರ ಭಯವೂ ಇಲ್ಲದಂತೆ ಬೇಬಿ ಬೆಟ್ಟದಲ್ಲಿ ನಿತ್ಯವೂ ನಡೆಯುತ್ತಿದೆ ಆ ಕೆಲಸ.

ಮಂಡ್ಯದ  ಪಾಂಡವಪುರದ  ಬೇಬಿಬೆಟ್ಟದ ಸುತ್ತಲೂ ಅಕ್ರಮ ಗಣಿಗಾರಿಕೆ ನಿಲ್ಲುತ್ತಿಲ್ಲ. ಯಾವುದೇ ಅಧಿಕಾರಿಗಳಿಗೂ ಕಿಮ್ಮತ್ತು ಕೊಡದೆ ದಿನನಿತ್ಯ ಗಣಿಗಾರಿಕೆ ನಡೆಸುತ್ತಿದ್ದಾರೆ.

ಸುತ್ತಮುತ್ತಲಿನಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಸ್ವಲ್ಪ ದೂರದಲ್ಲೇ ಇರುವ 
ಕೆ ಆರ್ ಎಸ್ ಆಣೆಕಟ್ಟೆಗೂ ಅಪಾಯ ಬಂದರೂ ಸಹ ಗಣಿಗಾರಿಕೆ ನಿಲ್ಲಿಸಲು ಮಾಲೀಕರು ಮುಂದಾಗುತ್ತಿಲ್ಲ.  ಬೇಬಿ ಬೆಟ್ಟದ ಸದಾಶಿವ ಸ್ವಾಮೀಜಿಗಳ ಗದ್ದುಗೆ ಒಂದು ಕೋಟಿ ವೆಚ್ಚದಲ್ಲಿ ಕಾಮಗಾರಿ ಶುರುವಾಗಿದೆ.

ಗದ್ದುಗೆಯ ಕೆಲಸ ನಡೆಯುತ್ತಿದ್ದು, ಕಲ್ಲು ಬ್ಲಾಸ್ಟಿಂಗ್ ಮಾಡುತ್ತಿರುವುದರಿಂದ ಸ್ವಾಮೀಜಿಯ ಗದ್ದುಗೆ ಬಿರುಕು ಬಿಟ್ಟು ಕೆಲ ಕಂಬಗಳು ನೆಲಕ್ಕೆ ಉರುಳಿ ಬಿದ್ದಿವೆ.

ಇದರ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳದೇ ಹೋದಲ್ಲಿ ಗುರು ಸಿದ್ಧೇಶ್ವರ ಸ್ವಾಮೀಜಿಗಳು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಮಗಳಿಗೊಂದು ಅಜ್ಜಿ ಬೇಕೆಂದು ಜಾಹೀರಾತು ಹಾಕಿದ ತಾಯಿ