Publish Date: Wed, 15 Mar 2023 (17:30 IST)
Updated Date: Wed, 15 Mar 2023 (17:32 IST)
ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ.ವೀರಶೈವ ಲಿಂಗಾಯಿತರಿಗೆ ಟಿಕೇಟು ನೀಡಿ ಎಂದು ಪ್ರಮುಖ ಮುಖಂಡರ ಸಭೆ ಮಾಡಿದ್ದಾರೆ.ರಾಜಾಜಿನಗರದ ಕಾಂಗ್ರೆಸ್ ಟಿಕೆಟ್ ಅನ್ನು ವೀರ ಶೈವ ಲಿಂಗಾಯಿತರಿಗೆ ಕೊಡುವಂತೆ ಪಟ್ಟು ಹಿಡಿದಿದ್ದಾರೆ.ರಾಜಾಜಿನಗರದ ಟಿಕೆಟ್ ಆಕಾಂಕ್ಷಿ ಪುಟ್ಟರಾಜು ಅವರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿ ಸಭೆ ಮಾಡಲಾಗಿದ್ದುಬೆಂಗಳೂರು ವೀರಶೈವ ಲಿಂಗಾಯಿತರ ಬಳಗದ ವತಿಯಿಂದ ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಸಭೆ ಮಾಡಿದ್ದು,ವಿಧಾನಸಭಾ ಚುನಾವಣೆಯಲ್ಲಿ ವೀರಶೈವ ಲಿಂಗಾಯಿತರಿಗೆ ಕಾಂಗ್ರೆಸ್ ಪಕ್ಷದ ಟಿಕೇಟು ನೀಡಬೇಕು ಎಂದು ಒತ್ತಾಯಿಸಿ ಸಭೆ ಮಾಡಲಾಗಿದೆ.