Publish Date: Wed, 15 Mar 2023 (17:16 IST)
Updated Date: Wed, 15 Mar 2023 (17:28 IST)
ಬೆಂಗಳೂರಿನಲ್ಲಿ ಸೀರಿಯಲ್ ಕಿಲ್ಲರ್ಸ್ ಆ್ಯಕ್ಟಿವ್ ಆಗಿದ್ದಾರ ಎಂಬ ಪ್ರಶ್ನೆ ಎದ್ದಿದೆ. ಹೀಗೊಂದು ಅನುಮಾನ ಮೂಡಲು ಕಾರಣ ಜನವರಿಯಲ್ಲಿ ಯಶವಂತಪುರ ರೈಲ್ವೆ ಠಾಣೆಯಲ್ಲಿ ಡ್ರಮ್ವೊಂದರಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು..30-35 ವಯಸ್ಸಿನ ಮಹಿಳೆಯ ಮೃತದೇಹ ಇದಾಗಿತ್ತು.. ಮತ್ತೊಂದೆಡೆ ಇದೇ ಮಾದರಿಯಲ್ಲಿ ಬೈಯಪ್ಪನಹಳ್ಳಿ ರೈಲ್ವೆ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ.. ಈ ಶವ ಕೂಡ ಮಹಿಳೆಯದ್ದಾಗಿದ್ದು, 31ರಿಂದ 35 ಆಸುಪಾಸು ವಯಸ್ಸಿನ ಮಹಿಳೆ ಶವ ಇದಾಗಿದೆ.. ನಿನ್ನೆ 10 ಗಂಟೆಗೆ ಮೂವರು ಹಂತಕರು ಬೈಯಪ್ಪನಹಳ್ಳಿ ರೈಲ್ವೆ ಠಾಣೆಯ ಮೇನ್ ಗೇಟ್ನಲ್ಲೇ ಡ್ರಮ್ನಲ್ಲಿ ಶವವಿಟ್ಟು ಪರಾರಿಯಾದ ದೃಶ್ಯ CCTVಯಲ್ಲಿ ಸೆರೆಯಾಗಿದೆ.. ಎರಡು ಶವಗಳು ಡ್ರಮ್ನಲ್ಲೇ ಹಾಕಿಡಲಾಗಿದ್ದು, ಎರಡು ಮರ್ಡರ್ಗಳನ್ನು ಸೀರಿಯಲ್ ಕಿಲ್ಲರ್ಸ್ ನಡೆಸಿದ್ದಾರ ಎಂಬ ಅನುಮಾನ ಮೂಡಿದೆ..ಬೈಯಪ್ಪನಹಳ್ಳಿ ರೈಲ್ವೆ ಠಾಣಾ ಘಟನಾ ಸ್ಥಳಕ್ಕೆ ರೈಲ್ವೆ SP ಸೌಮ್ಯಲತಾ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸೀರಿಯಲ್ ಕಿಲ್ಲರ್ಸ್ ಕೊಲೆ ಮಾಡಿರುವ ಹಿನ್ನೆಲೆಯಲ್ಲಿ ಪೊಲೀಸರು ಕೇಸ್ ದಾಖಲಿಸಿ ತನಿಖೆ ನಡೆಸಿದ್ದಾರೆ.