Publish Date: Wed, 15 Mar 2023 (17:13 IST)
Updated Date: Wed, 15 Mar 2023 (17:27 IST)
ಬೆಂಗಳೂರು ನಗರದ ಕೋರಮಂಗಲದಲ್ಲಿ ಅಪಾರ್ಟ್ಮೆಂಟ್ವೊಂದರ ಮೇಲಿಂದ ಬಿದ್ದು ಗಗನಸಖಿ ಅರ್ಚನಾ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಗಗನಸಖಿ ಅರ್ಚನಾ ಆತ್ಮಹತ್ಯೆ ಅಲ್ಲ ಕೊಲೆ ಎನ್ನುವುದು ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಅರ್ಚನಾಳನ್ನ ಆಕೆಯ ಬಾಯ್ ಫ್ರೆಂಡ್ ಆದೇಶ್ ಬಿಲ್ಡಿಂಗ್ ಮೇಲಿಂದ ತಳ್ಳಿ ಕೊಲೆ ಮಾಡಿದ್ದಾನೆ ಎಂಬ ಅಂಶ ತನಿಖೆ ವೇಳೆ ಬಯಲಾಗಿದೆ.. ಈ ಹಿನ್ನೆಲೆಯಲ್ಲಿ ಕೋರಮಂಗಲ ಪೊಲೀಸರು ಅರ್ಚನಾಳ ಪ್ರಿಯಕರ ಆದೇಶ್ ವಿರುದ್ಧ IPC 302 ಅಡಿಯಲ್ಲಿ FIR ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದಾರೆ. ಹಿಮಾಚಲ ಮೂಲದ ಅರ್ಚನಾ ಹಾಗೂ ಕೇರಳ ಮೂಲದ ಆದೇಶ್ ಡೇಟಿಂಗ್ ಅ್ಯಪ್ನಲ್ಲಿ ಪರಿಚಿತರಾಗಿದ್ದು, ಬಳಿಕ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಅರ್ಚನಾ ದುಬೈನ ಏರ್ಲೈನ್ಸ್ನಲ್ಲಿ ಗಗನಸಖೆಯಾಗಿದ್ದರೆ, ಆದೇಶ್ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ಹೀಗೆ ಆದೇಶನನ್ನು ನೋಡಲು ಅರ್ಚನಾ ದುಬೈನಿಂದ ಬೆಂಗಳೂರಿಗೆ ಆಗಮಿಸಿದ್ದಳು. ಆದ್ರೆ, ಮಾರ್ಚ್ 11ರಂದು ಅರ್ಚನಾ ಆದೇಶ ತಂಗಿದ್ದ ಅಪಾರ್ಟ್ಮೆಂಟ್ ಮೇಲಿಂದ ಬಿದ್ದು ಮೃತಪಟ್ಟಿದ್ದಳು. ಬಳಿಕ ಆದೇಶ್, ನಶೆಯಲ್ಲಿ ಬಿಲ್ಡಿಂಗ್ ಮೇಲಿಂದ ಬಿದ್ದು ಮೃತಪಟ್ಟಿದ್ದಾಳೆ ಎಂದು ಆಕೆಯ ತಂದೆಗೆ ಕರೆ ಮಾಡಿ ಹೇಳಿದ್ದ. ಅಲ್ಲದೇ ಪೊಲೀಸರಿಗೂ ಇದೇ ಹೇಳಿದ್ದ. ಆದ್ರೆ, ಈ ಸಾವಿನ ಬಗ್ಗೆ ಕುಟುಂಬಸ್ಥರಿಗೆ ಅನುಮಾನ ಬಂದಿದ್ದು, ಇದು ಆಕಸ್ಮಿಕವಾಗಿ ಬಿದ್ದಿರುವುದಲ್ಲ. ಆದೇಶ್ ಆಕೆಯನ್ನು ಮೇಲಿಂದ ತಳ್ಳಿದ್ದಾನೆ ಎಂದು ದೂರು ನೀಡಿದ್ದರು