Select Your Language

Notifications

webdunia
webdunia
webdunia
webdunia

‘ಹಾಸನ ಟಿಕೆಟ್​ HDD ನಿರ್ಧಾರ

‘ಹಾಸನ ಟಿಕೆಟ್​ HDD ನಿರ್ಧಾರ
ಹಾಸನ , ಬುಧವಾರ, 15 ಮಾರ್ಚ್ 2023 (17:23 IST)
ಹಾಸನ ಟಿಕೆಟ್​ ವಿಚಾರ ಕುರಿತು ಮಾಜಿ ಸಿಎಂ H.D. ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಹಾಸನ ಜಿಲ್ಲೆಯ ಸಂಪೂರ್ಣ ನರನಾಡಿ ನನಗೆ ಗೊತ್ತಿಲ್ಲ. ದೇವೇಗೌಡರಿಗೆ ಇಂಚಿಂಚು ವಿಚಾರ ಗೊತ್ತಿದೆ ಎಂದು ಟಿಕೆಟ್​ ಬಾಂಬ್​​​ ಅನ್ನು HDD ಅಂಗಳಕ್ಕೆ ಎಸೆದಿದ್ದಾರೆ.. ಅಂತಿಮ ನಿರ್ಣಯವನ್ನು ಮಾಜಿ ಸಿಎಂ H.D. ದೇವೇಗೌಡರೇ ಮಾಡ್ತಾರೆ.. ಅಲ್ಲಿವರೆಗೂ ಕಾಯಬೇಕು ಎಂದು HDK ಹೇಳಿದ್ದಾರೆ.. ಭವಾನಿ ರೇವಣ್ಣ, ಸ್ವರೂಪ್ ಹೊರತಾಗಿ K.M. ರಾಜೇಗೌಡ ಹೆಸರು ಪ್ರಸ್ತಾಪವಾಗಿದ್ದು, ನಾಳೆ ನಾಲ್ಕನೇ ಹೆಸ್ರು ಬಂದರೂ ಬರಬಹುದು ಎಂದು HDK ಸುಳಿವು ನೀಡಿದ್ದಾರೆ.. ಚುನಾವಣೆ ಘೋಷಣೆ ಆಗುವವರಿಗೆ ಆಡಿಷನಲ್ ಆದರೂ ಆಗಬಹುದು ಎಂದು ಸಹ ಹೇಳಿ ಅಡ್ಡ ಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

S.R.ಶ್ರೀನಿವಾಸ್‌ಗೆ C.M. ಇಬ್ರಾಹಿಂ ಆಫರ್