Publish Date: Fri, 04 Dec 2020 (14:46 IST)
Updated Date: Fri, 04 Dec 2020 (14:48 IST)
ಅವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಯುವಕ ಕೈಕೊಟ್ಟಿದ್ದರಿಂದಾಗಿ ಯುವತಿ ಬರಬಾರದ ಲೋಕಕ್ಕೆ ಹೋಗಿದ್ದಾಳೆ.
ಯುವತಿ ನಂದಿನಿ ಹಾಗೂ ಯುವಕ ಯೋಗೇಶ್ ಪರಸ್ಪರ ಲವ್ ಮಾಡುತ್ತಿದ್ದರು. ಆದರೆ ಯೋಗೇಶ್ ಗೆ ಪೊಲೀಸ್ ಕೆಲಸ ಸಿಕ್ಕಿದ್ದರಿಂದಾಗಿ ತನ್ನ ಪ್ರಿಯತಮೆಗೆ ಕೈಕೊಟ್ಟಿದ್ದಾನೆ.
ಮದುವೆಯಾಗೋದಕ್ಕೆ ಯೋಗೇಶ್ ಹಿಂದೇಟು ಹಾಕಿದ್ದರಿಂದಾಗಿ ನಂದಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೂರಲಾಗಿದೆ.
ಚಾಮರಾಜನಗರದ ಬೀಚಹಳ್ಳಿಯಲ್ಲಿ ಘಟನೆ ನಡೆದಿದೆ.