Select Your Language

Notifications

webdunia
webdunia
webdunia
webdunia

ಇಷ್ಟಕ್ಕೇ ರವಿಚಂದ್ರನ್ ಅಶ್ವಿನ್ ಕುತ್ತಿಗೆಗೆ ಕೈ ಹಾಕೋದಾ ಪತ್ನಿ ಪ್ರೀತಿ!

ಇಷ್ಟಕ್ಕೇ ರವಿಚಂದ್ರನ್ ಅಶ್ವಿನ್ ಕುತ್ತಿಗೆಗೆ ಕೈ ಹಾಕೋದಾ ಪತ್ನಿ ಪ್ರೀತಿ!
ಸಿಡ್ನಿ , ಶನಿವಾರ, 14 ನವೆಂಬರ್ 2020 (09:33 IST)
ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಕಾಂಗಾರೂ ನಾಡಿಗೆ ಬಂದಿಳಿದಿರುವ ಟೀಂ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇಲ್ಲಿಯೇ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ.


ಆಸ್ಟ್ರೇಲಿಯಾಗೆ ಬಂದ ಮೇಲೆ ಕ್ರಿಕೆಟಿಗರು ಕ್ವಾರಂಟೈನ್ ಅವಧಿಯಲ್ಲಿದ್ದಾರೆ. ಇದೇ ವೇಳೆ ಅಶ‍್ವಿನ್ ತಮ್ಮ ಪತ್ನಿಯೊಂದಿಗೆ ವಿವಾಹ ವಾರ್ಷಿಕೋತ್ಸವವನ್ನೂ ಆಚರಿಸಿಕೊಂಡಿದ್ದಾರೆ. ಈ ಕ್ಷಣದ ಫನ್ನಿ ಫೋಟೋವೊಂದನ್ನು ಅಶ್ವಿನ್ ಪತ್ನಿ ಪ್ರೀತಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಈ ಫೋಟೋದಲ್ಲಿ ಪ್ರೀತಿ ಅಶ್ವಿನ್ ಕುತ್ತಿಗೆ ಹಿಸುಕುತ್ತಿರುವ ದೃಶ್ಯವಿದ್ದು, ಇದರ ಜತೆಗೆ ವಿವಾಹ ವಾರ್ಷಿಕೋತ್ಸವದ ದಿನ ಕ್ವಾರಂಟೈನ್ ಆಗಿರುವುದಕ್ಕಿಂತ ದೊಡ್ಡ ವಿಶೇಷ ಇನ್ನೇನಿದೆ? ಎಸ್ಕೇಪ್ ಆಗಲು ಬೇರೆ ದಾರಿಯೇ ಇಲ್ಲ ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಬಾರಿ ಐಪಿಎಲ್ ಹರಾಜು ಪ್ರಕ್ರಿಯೆಯೇ ನಡೆಯಲ್ಲ?!