ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಏಕದಿನ, ಟಿ20 ಮತ್ತು ಟೆಸ್ಟ್ ಸರಣಿ ಆಡಲು ಟೀಂ ಇಂಡಿಯಾ ಸಿಡ್ನಿಗೆ ಬಂದಿಳಿದಿದೆ. ವಿರಾಟ್ ಕೊಹ್ಲಿ ನೇತೃತ್ವದ ಜಂಬೋ ಜೆಟ್ ಕಾಂಗಾರೂ ನಾಡಿಗೆ ಬಂದಿಳಿದಿರುವುದನ್ನು ಸ್ವತಃ ಕೋಚ್ ರವಿಶಾಸ್ತ್ರಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಸಮೇತ ಹಂಚಿಕೊಂಡಿದ್ದಾರೆ.
ಕೊರೋನಾ ಕಾರಣದಿಂದ ಕೊಹ್ಲಿ ಪಡೆ ಈ ಬಾರಿ ದೊಡ್ಡ ಪಡೆಯನ್ನೇ ಕಟ್ಟಿಕೊಂಡು ಆಸ್ಟ್ರೇಲಿಯಾಗೆ ಬಂದಿಳಿದಿದೆ. ಅಭ್ಯಾಸ ನಡೆಸಲು ನೆಟ್ ಬೌಲರ್ ಗಳು, ಅಭ್ಯಾಸ ಪಂದ್ಯದಲ್ಲಿ ಆಡಲು ನೆಟ್ ಬೌಲರ್ ಗಳು ಸೇರಿದಂತೆ ಕೊಹ್ಲಿ ಪಡೆಯಲ್ಲಿ 40 ಕ್ಕೂ ಹೆಚ್ಚು ಮಂದಿಯಿದ್ದಾರೆ. ಇವರೆಲ್ಲರೂ ಆಸ್ಟ್ರೇಲಿಯಾದಲ್ಲಿ ಕೊರೋನಾ ಟೆಸ್ಟ್ ಗೊಳಗಾಗಿ ಅಭ್ಯಾಸಕ್ಕಿಳಿಯಲಿದ್ದಾರೆ.