Publish Date: Thu, 12 Nov 2020 (09:12 IST)
Updated Date: Thu, 12 Nov 2020 (09:14 IST)
ದುಬೈ: ಈ ಬಾರಿಯ ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕರಾಗಿದ್ದ ಕೆಎಲ್ ರಾಹುಲ್ ಮತ್ತು ಕೋಚ್ ಆಗಿದ್ದ ಅನಿಲ್ ಕುಂಬ್ಳೆಯನ್ನೇ ಮುಂದಿನ ಆವೃತ್ತಿಗೂ ಉಳಿಸಿಕೊಳ್ಳಲು ಫ್ರಾಂಚೈಸಿ ಉತ್ಸುಕವಾಗಿದೆ.
ಈ ಜೋಡಿ ಪಂಜಾಬ್ ತಂಡವನ್ನು ಈ ಬಾರಿ ಉತ್ತಮವಾಗಿ ಮುನ್ನಡೆಸಿತ್ತು. ಆದರೆ ದುರದೃಷ್ಟವಶಾತ್ ಪ್ಲೇ ಆಫ್ ಹಂತಕ್ಕೇರಲು ವಿಫಲವಾಗಿತ್ತು. ಆದರೆ ಉತ್ತಮ ಹೋರಾಟ ನಡೆಸಿಯೇ ಸೋಲೊಪ್ಪಿಕೊಂಡಿತ್ತು. ಹೀಗಾಗಿ ಇದೇ ಜೋಡಿಯ ಮೇಲೆ ಭರವಸೆ ಇಡಲು ಪಂಜಾಬ್ ನಿರ್ಧರಿಸಿದೆ. ಆದರೆ ಸಂಪೂರ್ಣ ವೈಫಲ್ಯ ಕಂಡಿರುವ ಗ್ಲೆನ್ ಮ್ಯಾಕ್ಸ್ ವೆಲ್ ರನ್ನು ಮುಂದಿನ ಆವೃತ್ತಿಗೆ ಕೈ ಬಿಡುವ ಸಾಧ‍್ಯತೆಯಿದೆ.