ದುಬೈ: ಐಪಿಎಲ್ 13 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಪ್ಲೇ ಆಫ್ ಹಂತಕ್ಕೇರದೇ ಇದ್ದರೂ ನಾಯಕ ಕೆಎಲ್ ರಾಹುಲ್ ಈ ಕೂಟದ ಗರಿಷ್ಠ ರನ್ ಗಳಿಸಿದ ಬ್ಯಾಟ್ಸ್ ಮನ್ ಎಂಬ ದಾಖಲೆ ಮಾಡಿದ್ದರು.
ಈ ದಾಖಲೆಯನ್ನು ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟ್ಸ್ ಮನ್ ಶಿಖರ್ ಧವನ್ ಮುರಿಯಬಹುದು ಎಂಬ ವಿಶ್ವಾಸವಿತ್ತು. ಆದರೆ ಧವನ್ ಗೆ ಕೊನೆಗೂ ಆ ದಾಖಲೆ ಮುರಿಯಲಾಗಲಿಲ್ಲ. ಫೈನಲ್ ಪಂದ್ಯದಲ್ಲಿ ಧವನ್ 15 ರನ್ ಗಳಿಸಿದರು. ಇದರೊಂದಿಗೆ ಧವನ್ ಈ ಐಪಿಎಲ್ ನಲ್ಲಿ ಒಟ್ಟು 618 ರನ್ ಗಳಿಸಿದರು. ರಾಹುಲ್ 670 ರನ್ ಗಳಿಸಿದ್ದರು. ಹೀಗಾಗಿ ರಾಹುಲ್ ಕೊನೆಗೂ ಈ ಕೂಟದ ಗರಿಷ್ಠ ರನ್ನರ್ ದಾಖಲೆಯನ್ನು ತಮ್ಮಲ್ಲೇ ಉಳಿಸಿಕೊಂಡರು.