Publish Date: Wed, 11 Nov 2020 (09:10 IST)
Updated Date: Wed, 11 Nov 2020 (09:13 IST)
ಮುಂಬೈ: ಐಪಿಎಲ್ 13 ರಲ್ಲಿ ಮುಂಬೈ ಇಂಡಿಯನ್ಸ್ ಚಾಂಪಿಯನ್ ಆದ ಖುಷಿಯನ್ನು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಸಾಮಾಜಿಕ ಜಾಲತಾಣ ಮೂಲಕ ಹಂಚಿಕೊಂಡಿದ್ದಾರೆ.
ಮುಂಬೈ ಗೆಲುವಿನ ಕ್ಷಣವನ್ನು ಆಸ್ವಾದಿಸುವ ವಿಡಿಯೋ ಪ್ರಕಟಿಸಿರುವ ಸಚಿನ್, ಅದ್ಭುತ ಗೆಲುವು. ಮುಂಬೈ ಇಂಡಿಯನ್ಸ್ ಸಂಪೂರ್ಣ ಪ್ರಾಬಲ್ಯ ಮೆರೆದಿದೆ. ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗಳು ಅದ್ಭುತವಾಗಿ ತಮ್ಮ ಕರ್ತವ್ಯ ನಿಭಾಯಿಸಿದ್ದಾರೆ ಎಂದು ಸಚಿನ್ ಕೊಂಡಾಡಿದ್ದಾರೆ. ಮುಂಬೈ ಇಂಡಿಯನ್ಸ್ ಮಾಜಿ ಆಟಗಾರರಾಗಿರುವ ಸಚಿನ್ ಈಗಲೂ ತಂಡಕ್ಕೆ ಅಗತ್ಯ ಬಂದಾಗ ಸಲಹೆಗಾರನಾಗಿಯೂ ಕೆಲಸ ಮಾಡುತ್ತಾರೆ.