Select Your Language

Notifications

webdunia
webdunia
webdunia
webdunia

ಡ್ರಂಕ್‌ & ಡ್ರೈವ್‌ ಆರೋಪದಡಿ ಪೊಲೀಸರ ಸುಲಿಗೆ

crime news
ಬೆಂಗಳೂರು -ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದೀರೆಂದು ಆರೋಪಿಸಿ ತನ್ನ ಬಳಿ ಪೊಲೀಸರು ಸುಲಿಗೆ ಮಾಡಿದ್ದಾರೆಂದು ಯುವತಿಯೊಬ್ಬಳು ಆಯುಕ್ತರ ಬಳಿ ದೂರು ಸಲ್ಲಿಸಿದ್ದಾಳೆ. ಶುಕ್ರವಾರ ರಾತ್ರಿ 11.00 ಗಂಟೆಯಲ್ಲಿ ನನ್ನ ವಾಹನವನ್ನು ತಡೆದು ನಿಲ್ಲಿಸಿದ ಪೊಲೀಸರು ಯಾವುದೇ ತಪಾಸಣೆ ನಡೆಸದೆ ಬೆದರಿಕೆ ಹಾಕಿದರು. ಬಳಿಕ 15 ಸಾವಿರ ರೂ. ಹಣಕ್ಕೆ ಬೇಡಿಕೆಯಿಟ್ಟರು. ಬಳಿಕ ಗೂಗಲ್‌ ಪೇ ಮೂಲಕ 5 ಸಾವಿರ ರೂ. ಹಣ ವಸೂಲಿ ಮಾಡಿ ತನ್ನನ್ನು ಹೋಗಲು ಬಿಟ್ಟರು ಎಂದು ಯುವತಿ ದೂರಿದ್ದಾಳೆ. 

ಶುಕ್ರವಾರ ರಾತ್ರಿ ಜೀವನ್‌ ಭೀಮಾ ನಗರ ಠಾಣಯ ಪೊಲೀಸರಿಂದ ಈ ಕೃತ್ಯ ನಡೆದಿದೆ ಎಂದು ಯುವತಿ ಆರೋಪಿಸಿದ್ದಾಳೆ.ಯುವತಿಯ ತಂದೆ ಎಕ್ಸ್‌ ಮೂಲಕ ಬೆಂಗಳೂರು ಪೊಲೀಸ್‌ ಆಯುಕ್ತರಲ್ಲಿ ದೂರು ಸಲ್ಲಿಸಿದ್ದಾರೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ಮುಸ್ಲಿಂ ಮುಖಂಡರು ಬೆಳೆಯಲು ಕಾಂಗ್ರೆಸ್‌ ಬಿಡುವುದಿಲ್ಲ