Select Your Language

Notifications

webdunia
webdunia
webdunia
webdunia

ಕುಡಿದು ಗಲಾಟೆ ಮಾಡಿದ ಯುವಕ

crime news
ಬೆಂಗಳೂರು :  ಯುವಕನೊಬ್ಬನಿಗೆ ಅಪಾರ್ಟ್‌ ಮೆಂಟ್‌ ಸೆಕ್ಯುರಿಟಿಗಳು ಸಾಮೂಹಿಕವಾಗಿ ಲಾಠಿ ಪ್ರಹಾರ ಮಾಡಿರುವ ಘಟನೆ ನಗರದಲ್ಲಿ ಸೋಮವಾರ ಸಂಜೆ ನಡೆದಿದೆ. ಕಾರ್ತಿಕ್‌ ಎಂಬಾತನೇ ಸೆಕ್ಯುರಿಟಿಗಳಿಂದ ಬಾರುಕೋಲು ಸೇವೆ ಮಾಡಿಸಿಕೊಂಡ ಯುವಕನಾಗಿದ್ದಾನೆ.ರಾಜಾನುಕುಂಟೆ ಸಮೀಪವಿರುವ ಪ್ರಾವಿಡೆಂಟ್‌ ವೆಲ್‌ ವರ್ತ್‌ ಸಿಟಿ ಅಪಾರ್ಟ್‌ ಮೆಂಟ್‌ ನಲ್ಲಿ ನಿನ್ನೆ ರಾತ್ರಿ ಕಾರ್ತಿಕ್‌ ನುಗ್ಗಿದ್ದ. ಈತನ ಅಸಹಜ ವರ್ತನೆ ಹಾಗೂ ಗಲಾಟೆಯಿಂದ ಬೇಸತ್ತ ನಾಗರಿಕರು ಸೆಕ್ಯುರಿಟಿ ಗಾರ್ಡ್‌ ಗಳನ್ನು ಕರೆದಿದ್ದರು. ಬಳಿಕ ಗುಂಪಿನಲ್ಲಿ ಬಂದ ಸುಮಾರು 6-8 ಮಂದಿ ಸೆಕ್ಯುರಿಟಿ ಗಾರ್ಡ್‌ ಗಳು ಕಾರ್ತಿಕ್‌ ನನ್ನು ಸುತ್ತುವರೆದು ಮನಬಂದಂತೆ ಥಳಿಸಿದ್ದಾರೆ. 

 ಮಧ್ಯಪ್ರವೇಶಿಸಿ ಅಪಾರ್ಟ್‌ ಮೆಂಟ್‌ ನಿವಾಸಿಗಳು ಆತನ ಮೇಲೆ ಹಲ್ಲೆ ನಡೆಸಲು ನಿಮಗೆ ಹಕ್ಕಿಲ್ಲ. ಪೊಲೀಸರಿಗೆ ಹಿಡಿದು ಕೊಡಿ ಎಂದು ಕಾರ್ತಿಕ್‌ ನನ್ನು ಮತ್ತಷ್ಟು ಏಟುಗಳಿಂದ ರಕ್ಷಿಸಿದ್ದಾರೆ.ಕಾರ್ತಿಕ್‌ ಸೋದರ ಸೆಕ್ಯುರಿಟಿ ಗಾರ್ಡ್‌ ಗಳ ವಿರುದ್ದ ರಾಜಾನುಕುಂಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. 

Share this Story:

Follow Webdunia kannada

ಮುಂದಿನ ಸುದ್ದಿ

ಕಾಡುಗೋಡಿ ಪೊಲೀಸರ ಭರ್ಜರಿ ಕಾರ್ಯಚರಣೆ