ಬೆಂಗಳೂರು-ಕಾಡುಗೋಡಿ ಪೊಲೀಸರ ಭರ್ಜರಿ ಕಾರ್ಯಚರಣೆ ನಡೆಸಲಾಗಿದೆ.ವನ್ಯ ಜೀವಿ ಅವಶೇಷ ಮಾರಟ ಮಾಡಲು ಮುಂದಾಗಿದ್ದ ಆರೋಪಿಗಳನ್ನ ಬಂಧನಮಾಡಲಾಗಿದೆ.ಪಣಿಂದರ್ ಮತ್ತು ರೆಹಮತುಲ್ಲಾ ಬಂಧಿತ ಆರೋಪಿಗಳಾಗಿದ್ದು,ಇಬ್ಬರು ಅಂತರಾಜ್ಯ ಸ್ಮಗ್ಲರ್ ಗಳನ್ನ ವಶಕ್ಕೆ ಪಡೆಯಲಾಗಿದೆ.ಆಂಧ್ರದಿಂದ ತಂದು ಮೈಸೂರಿನಲ್ಲಿ ಮಾರಟ ಮಾಡಲು ಆರೋಪಿಗಳು ಖಾಸಾಗಿ ಬಸ್ಸ್ ನಲ್ಲಿ ತಂದಿದ್ದರು.ಬಂಧಿತರಿಂದ 33 ಜಿಂಕೆ ಕೊಂಬು 6 ತಲೆ ಪೊಲೀಸರ ವಶಕ್ಕೆ ಪಡೆಯಲಾಗಿದೆ.
ಈ ಪ್ರಕರಣದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್, ವನ್ಯಜೀವಿ ಕೊಂಬು ಮಾರಲು ಯತ್ನಿಸಿದವರ ಬಂಧನ ಆಗಿದೆ. ಕಾಡುಗೋಡಿ ಪೊಲೀಸರು ಉತ್ತಮ ಕಾರ್ಯ ನಿರ್ವಹಿಸಿದ್ದಾರೆ. ಬಂಧಿತರಿಂದ 33 ಜಿಂಕೆ ಕೊಂಬು, ತಲೆ ಇರುವ 6 ಜಿಂಕೆ ಕೊಂಬು ವಶ ಪಡೆಯಲಾಗಿದೆ. ಆಂಧ್ರದಿಂದ ಜಿಂಕೆ ಕೊಂಬು ತಂದು 40ರಿಂದ 50 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದರು. ಅವರನ್ನ ಕಾಡುಗೋಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.