Publish Date: Wed, 21 Feb 2024 (18:04 IST)
Updated Date: Wed, 21 Feb 2024 (18:08 IST)
ಬೆಂಗಳೂರು : ವಿಮಾನ ನಿಲ್ದಾಣ ಸಿಬ್ಬಂದಿ ಬಳಿ ತಾನೊಬ್ಬ ಟೆರರಿಸ್ಟ್ ಎಂದು ಬೆದರಿಕೆ ಹಾಕಿರುವ ಘಟನೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಆರೋಪಿ ಆದರ್ಶ್ ಕುಮಾರ್ ಈಗ ಪೊಲೀಸರ ಅತಿಥಿಯಾಗಿದ್ದಾನೆ.ಟಿಕೆಟ್ ಇಲ್ಲದೇ ವಿಮಾನ ಪ್ರಯಾಣಕ್ಕೆ ಮುಂದಾದ ಯುವಕನೊಬ್ಬ ಫೆ. 17 ರಂದು ಬೆಂಗಳೂರು – ಲಖ್ನೋ ವಿಮಾನವಲ್ಲಿ ಪ್ರಯಾಣಿಸಲು ಆದರ್ಶ್ ಕುಮಾರ್ ಬಂದಿದ್ದ. ಆದರೆ ಈತ ವಿಮಾನ ಪ್ರಯಾಣಕ್ಕೆ ಟಿಕೆಟ್ ಪಡೆದಿರಲಿಲ್ಲ.
ಸಿಐಎಸ್‌ಎಫ್ ತಪಾಸಣೆಯ ವೇಳೆ ತಾನೊಬ್ಬ ಟೆರರಿಸ್ಟ್ ಎಂದು ಬೆದರಿಕೆ ಹಾಕಿದ್ದ. ಕೂಡಲೇ ವಿಮಾನ ನಿಲ್ದಾಣದ ಸಿಬ್ಬಂದಿ ಪೊಲೀರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆದರ್ಶ್ ಕುಮಾರ್ ನನ್ನು ವಶಕ್ಕೆ ಪಡೆದಿದ್ದರು. ಏರ್ ಪೋರ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.