Select Your Language

Notifications

webdunia
webdunia
webdunia
webdunia

ಪ್ರೇಮಿಗಳ ದಿನ ಮದ್ಯಪಾನ ನಿಷೇಧಕ್ಕೆ ಕಿಡಿ

 ಮದ್ಯಪಾನ

geetha

bangalore , ಶುಕ್ರವಾರ, 9 ಫೆಬ್ರವರಿ 2024 (20:00 IST)
ಬೆಂಗಳೂರು-ಫೆ. 16 ರಂದು ಪ್ರೇಮಿಗಳ ದಿನಾಚರಣೆ ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ರಂದು ವಿಧಾನ ಪರಿಷತ್ ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಫೆ. 14ರ ಸಂಜೆ 5ರಿಂದ ಫೆ. 16ರ ಮಧ್ಯರಾತ್ರಿವರೆಗೆ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿರುವ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಕಡೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.ಅಲ್ಲದೆ ಫೆ. 14ರ ಪ್ರೇಮಿಗಳ ದಿನಾಚರಣೆಯಂದು ಮದ್ಯಪಾನಕ್ಕೆ ನಿಷೇಧ ಹೇರಲಾಗಿದ್ದು, ಈ ಬೆಳವಣಿಗೆಗೆ ಎಫ್ & ಬಿ ಉದ್ಯಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಪ್ರೇಮಿಗಳ ದಿನಾಚರಣೆಗಾಗಿ ಡಿಜೆ,ವಿಶೇಷ ಮೆನು ಸೇರಿದಂತೆ ಹಲವು ಸಿದ್ಧತೆಗಳನ್ನು ನಡೆಸಿದ್ದೆವು. ಇದೀಗ ಎಲ್ಲವೂ ನಷ್ಟವಾದಂತಾಗಿದೆ ಎಂದು ಎನ್‌ಆರ್‌ಎಐ ಜಂಟಿ ಕಾರ್ಯದರ್ಶಿ ಹಾಗೂ ಜನಪ್ರಿಯ ಬಾರ್ ವಾಟ್ಸನ್‌ ಮಾಲೀಕ ಅಮಿತ್ ರಾಯ್ ರವರು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಾಕ್ ನಲ್ಲಿ ಮತ ಎಣಿಕೆ ಶುರು..!