Publish Date: Sun, 11 Apr 2021 (11:29 IST)
Updated Date: Sun, 11 Apr 2021 (11:42 IST)
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಚರ್ಚಿಸಲು ಪ್ರಧಾನಿ ಮೋದಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಕರೆ ಮಾಡಿದ್ದಾರೆ.
ದೂರವಾಣಿ ಮೂಲಕ ಸಿಎಂ ಅವರನ್ನು ಸಂಪರ್ಕಿಸಿದ ಪ್ರಧಾನಿ ಮೋದಿ , ರಾಜ್ಯದ ಕೊರೊನಾ ಸ್ಥಿತಿ ವಿಚಾರಿಸಿದ್ದಾರೆ. ನೈಟ್ ಕರ್ಪ್ಯೂ ಬಗ್ಗೆಯೂ ಮಾಹಿತಿ ಪಡೆದಿದ್ದರೆ. ಕೊರೊನಾ ಟೆಸ್ಟ್ ಹೆಚ್ಚಳಕ್ಕೆ ಮೋದಿ ಸಲಹೆ ನೀಡಿದ್ದಾರೆ. ಹಾಗೇ ಕೊರೊನಾ ಕಂಟ್ರೋಲ್ ಬಗ್ಗೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಸೂಚನೆ ಬೆನ್ನಲೇ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಸಿಎಂ, ಸಿಕ್ಕ ಸಿಕ್ಕಲ್ಲಿ ಕೊರೊನಾ ಟೆಸ್ಟ್ ನಡೆಸುವುದು ಬೇಡ. ಮೈಕ್ರೋ ಕಂಟೇನ್ಮೆಂಟ್ ಜೋನ್ ಬಗ್ಗೆ ಹೆಚ್ಚು ಗಮನ ಕೊಡಿ. ಅಲ್ಲಿ ಹೆಚ್ಚು ಟೆಸ್ಟ್ ನಡೆಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹಾಗೇ ಏ.20ರವರೆಗೂ ಕೊರೊನಾ ಕರ್ಪ್ಯೂ ಜಾರಿಗೊಳಿಸಿದ್ದೇವೆ ಎಂಬುದಾಗಿ ತಿಳಿಸಿದ್ದಾರೆ.