Publish Date: Sun, 11 Apr 2021 (06:57 IST)
Updated Date: Sun, 11 Apr 2021 (06:59 IST)
ಬೆಂಗಳೂರು : ಲಕ್ಷ್ಮಿ ಸಂಪತ್ತಿಗೆ ಅಧಿದೇವತೆ. ಹಾಗಾಗಿ ಲಕ್ಷ್ಮಿ ಯಾರಿಗೆ ಒಲಿಯುತ್ತಾಳೋ ಅವರ ಬಳಿ ಸಂಪತ್ತು ತುಂಬಿ ತುಳುಕುತ್ತಿರುತ್ತದೆ. ಹಾಗಾಗಿ ಈ ಸಂಖ್ಯೆಯಲ್ಲಿ ಜನಿಸಿದವರ ಮೇಲೆ ಲಕ್ಷ್ಮಿಯ ಅನುಗ್ರಹ ಯಾವಾಗಲೂ ಇರುವುದರಿಂದ ಅವರು ಶ್ರೀಮಂತರಾಗಿರುತ್ತಾರಂತೆ.
ಸಂಖ್ಯಾಶಾಸ್ತ್ರದ ಪ್ರಕಾರ 3, 12, 21,30 ರ ಜನ್ಮ ದಿನಾಂಕವನ್ನು ಹೊಂದಿರುವವರು ರಾಡಿಕ್ಸ್ 3 ಅನ್ನು ಹೊಂದಿರುತ್ತಾರೆ. ಇವರ ಮೇಲೆ ಲಕ್ಷ್ಮಿಯ ಅನುಗ್ರಹವಿರುವುದರಿಂದ ಇವರು ಸಾಕಷ್ಟು ಸಮೃದ್ಧ, ಸಂಪತ್ತನ್ನು ಹೊಂದಿರುತ್ತಾರೆ. ಇವರು ತುಂಬಾ ಧೈರ್ಯಶಾಲಿಗಳಾಗಿರುತ್ತಾರೆ. ಇವರು ಕಠಿಣ ಶ್ರಮ, ತಮ್ಮ ತೀಕ್ಷ್ಣ ಬುದ್ಧಿಶಕ್ತಿಯಿಂದ ಅಲ್ಫಾವಧಿಯಲ್ಲಿಯೇ ತಮ್ಮ ಗುರುಯನ್ನು ಮುಟ್ಟುತ್ತಾರೆ.
ರಾಡಿಕ್ಸ್ 3ರನ್ನು ಹೊಂದಿರುವವರು ಚರ್ಮದ ಸಮಸ್ಯೆಗೆ ಒಳಗಾಗುತ್ತಾರೆ. ಬೆನ್ನು ನೋವು, ಕಾಲು ಸಂಧಿನೋವಿಗೆ ಒಳಗಾಗುತ್ತಾರೆ. ಇವರಿಗೆ ಗುರುವಾರ ತುಂಬಾ ಅನುಕೂಲಕರ ದಿನವಾಗಿದೆ. ನೀಲಿ, ಕೆಂಪು, ಗುಲಾಬಿ ಬಣ‍್ಣಗಳು ಇವರಿಗೆ ಶುಭವಾಗಿದೆ.