Select Your Language

Notifications

webdunia
webdunia
webdunia
webdunia

ಭಾರೀ ಮಳೆಗೆ ಜನ ಜೀವನ ಅಸ್ತವ್ಯಸ್ಥ

People's lives are disrupted due to heavy rains
ಚಿಕ್ಕೋಡಿ , ಶನಿವಾರ, 22 ಅಕ್ಟೋಬರ್ 2022 (20:28 IST)
ರಾಜ್ಯದ ಕೆಲ ಕಡೆ ಹಲವು ದಿನಗಳಿಂದ ವರುಣನ ಆರ್ಭಟ ಜೋರಾಗಿದೆ. ನಿನ್ನೆ ರಾತ್ರಿ‌ ಸುರಿದ ಮಳೆಯಿಂದಾಗಿ ಚಿಕ್ಕೋಡಿ - ಅಂಕಲಿ ರಾಜ್ಯ ಹೆದ್ದಾರಿ‌ ಮೇಲೆ ನೀರು ನಿಂತು ಜನ ಪರದಾಡಿದ್ರು. ಮಳೆ ನೀರಿನಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ರಸ್ತೆಯ ಮೇಲೆ ಮಳೆ ನೀರು ನಿಂತಿದ್ದು, ವಾಹನ ಸವಾರರು ಪರದಾಡಿದ್ರು. ವಾಹನಗಳು ಕೆರೆಯಂತಾದ ರಸ್ತೆಯಲ್ಲೇ ಸಂಚಾರ ಮಾಡಿದ್ರು. ಚಿಕ್ಕೋಡಿ ತಾಲೂಕಿನ ಬಾವನಸೌದತ್ತಿ ಗ್ರಾಮಕ್ಕೂ ಮಳೆ ನೀರು ನುಗ್ಗಿತ್ತು. ಮನೆಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ನಾನಾ ಅವಾಂತರಗಳು ಸೃಷ್ಟಿಯಾಗಿದೆ. ವೃದ್ದೆ ಬಾಳವ್ವ ಕುಷ್ಟಿ ಎಂಬುವವರ ಮನೆಗೆ ಮಳೆ ನೀರು ನುಗ್ಗಿದೆ. ರಾತ್ರಿ ಸುರಿದ ಮಳೆಯಿಂದಾಗಿ ಬಾವನಸೌದತ್ತಿ ಗ್ರಾಮಸ್ಥರು ಭಾರಿ ತೊಂದರೆ ಅನುಭವಿಸಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಬೋನಸ್​​​ ನೀಡದ್ದಕ್ಕೆ ಟವರ್ ಏರಿ ಕುಳಿತ!