Select Your Language

Notifications

webdunia
webdunia
webdunia
webdunia

ಬೋನಸ್​​​ ನೀಡದ್ದಕ್ಕೆ ಟವರ್ ಏರಿ ಕುಳಿತ!

Sitting on the tower for bonus
ಕಲಬುರಗಿ , ಶನಿವಾರ, 22 ಅಕ್ಟೋಬರ್ 2022 (20:21 IST)
ದೀಪಾವಳಿ ಬೋನಸ್ ನೀಡಿಲ್ಲ ಎಂದು ಕಾರ್ಮಿಕ ಟವರ್ ಏರಿ ಕುಳಿತಿರುವ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಶಹಬಾದ್ ನಗರದಲ್ಲಿರುವ J.P. ಸಿಮೆಂಟ್ ಕಾರ್ಖಾನೆಯಲ್ಲಿ ನಡೆದಿದೆ. ಮಹಮ್ಮದ್ ರಶೀದ್ J.P. ಸಿಮೆಂಟ್ ಕಾರ್ಖಾನೆಯ ಕಾರ್ಮಿಕನಾಗಿದ್ದು. ಬೋನಸ್ ನೀಡುವಂತೆ ಆಗ್ರಹಿಸಿ ಬೆಳಗ್ಗೆ 9 ಗಂಟೆ ಸುಮಾರಿಗೆ ಹೊಸದಾಗಿ ನಿರ್ಮಿಸಿರುವ ಸೆಲ್ಲೋ  ಟವರ್ ಏರಿ ಕುಳಿತು ಆಗ್ರಹಿಸಿದ್ದಾನೆ. ಕಾರ್ಖಾನೆ ಆಡಳಿತ ಮಂಡಳಿ ನಿಯಮದ ಪ್ರಕಾರ ಬೋನಸ್ ನೀಡ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ. ಸಹ ಕಾರ್ಮಿಕರು ಕೆಳಗಡೆ ಇಳಿಯುವಂತೆ ಹೇಳಿದ್ರು ಸಹ ಇಳಿಯದ ಕಾರ್ಮಿಕ, ಕಾರ್ಖಾನೆಯವರು ಬೋನಸ್ ನೀಡವವರೆಗೂ ಕೆಳಗಿಳಿಯುವದಿಲ್ಲ ಅಂದು ಹಠ ಹಿಡಿದಿದ್ದಾನೆ. 

Share this Story:

Follow Webdunia kannada

ಮುಂದಿನ ಸುದ್ದಿ

ಭೀಕರ ಅಪಘಾತದಲ್ಲಿ 14 ಜನ ದುರ್ಮರಣ