Select Your Language

Notifications

webdunia
webdunia
webdunia
webdunia

‘ವೈದ್ಯರ ಲೋಪವಿದ್ರೆ ಕಠಿಣ ಕ್ರಮ’

‘ವೈದ್ಯರ ಲೋಪವಿದ್ರೆ ಕಠಿಣ ಕ್ರಮ’
ವಿಜಯಪುರ , ಶನಿವಾರ, 22 ಅಕ್ಟೋಬರ್ 2022 (18:51 IST)
ವಿಜಯಪುರ ಜಿಲ್ಲೆಯ ಹೊಸಪೇಟೆಯಲ್ಲಿ ನವಜಾತ ಶಿಶು ಸಾವು ಪ್ರಕರಣದಲ್ಲಿ ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣವಾಗಿದ್ರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್​​ ಹೇಳಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ನೀಡಲು ಹಣ ಕೇಳ್ತಾರೆ ಎಂಬ ಆರೋಪವಿದೆ. ಅದು ಸಾಬೀತಾದ್ರೆ ಅದಕ್ಕೂ ಕ್ರಮ ಕೈಗೊಳ್ತೇವೆ ಎಂದು ತಿಳಿಸಿದ್ರು.  MCH ಆಸ್ಪತ್ರೆ ವೈದ್ಯರು ಸ್ಕ್ಯಾನಿಂಗ್​ಗೆ ತಮಗೆ ಬೇಕಾದ ಕ್ಲಿನಿಕ್​ಗಳಿಗೆ  ಬರೆದುಕೊಡುತ್ತಾರೆ ಅನ್ನೋ ಆರೋಪ ಇದೆ. ಅದರ ಬಗ್ಗೆಯೂ ತನಿಖೆ ಮಾಡಲು ತಂಡ ರಚನೆ ಮಾಡಲಾಗಿದೆ. ವರದಿ ಬಂದ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ. ಸಾವಿಗೆ ಇಂತವರೇ ಹೊಣೆ ಎಂದು ಸದ್ಯಕ್ಕೆ ಹೇಳಲು ಆಗಲ್ಲ, ತನಿಖೆಯಾಗುತ್ತಿದೆ. ಹಾಗೆ ವೈದ್ಯರು & ಸಾವನ್ನಪ್ಪಿದ ಮಗುವಿನ ಸಂಬಂಧಿಕರಿಂದಲೂ ಮಾಹಿತಿ ಪಡೆದಿದ್ದೇನೆ ಎಂದು ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ತಿಳಿಸಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಯನ್ನೇ ಕೊಂದ ಪಾಪಿ ಪತಿರಾಯ