Publish Date: Sun, 20 Oct 2019 (18:54 IST)
Updated Date: Sun, 20 Oct 2019 (19:00 IST)
ಪಾಪಿ ಪಾಕಿಸ್ತಾನದ ಸೇನೆ ವಿರುದ್ಧ ಭಾರತ ಪ್ರಬಲವಾಗಿ ಪ್ರತೀಕಾರದ ಕ್ರಮವಾಗಿ ಭಯೋತ್ಪಾದಕರ ನೆಲೆ ಮೇಲೆ ದಾಳಿ ನಡೆಸಿದೆ.
ಭಾರತೀಯ ಯೋಧರು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕರ ನೆಲೆಗಳ ಮೇಲೆ ದಾಳಿ ನಡೆಸಿದ್ದಾರೆ.
ಭಯೋತ್ಪಾದಕರ 7 ಉಡಾವಣಾ ನೆಲೆಗಳು ಧ್ವಂಸಗೊಂಡಿವೆ. ಪಾಕಿಸ್ತಾನ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿದೆ.
ಹೀಗಾಗಿ ಭಾರತದ ಸೈನಿಕರು ಕಾರ್ಯಾಚರಣೆ ನಡೆಸಿದ್ದು, 12 ಪಾಕಿಸ್ತಾನ ಸೈನಿಕರು ಹಾಗೂ 20ಕ್ಕೂ ಹೆಚ್ಚು ಭಯೋತ್ಪಾದಕರು ಹತರಾಗಿದ್ದಾರೆ ಎನ್ನಲಾಗಿದೆ.