Publish Date: Sun, 20 Oct 2019 (12:18 IST)
Updated Date: Sun, 20 Oct 2019 (12:25 IST)
ರಾಂಚಿ: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ದ್ವಿಶತಕ ಸಿಡಿಸಿದ್ದಾರೆ.
ಇದು ಟೆಸ್ಟ್ ಕ್ರಿಕೆಟ್ ನಲ್ಲಿ ರೋಹಿತ್ ಗೆ ಚೊಚ್ಚಲ ದ್ವಿಶತಕ ಎಂಬುದು ವಿಶೇಷವಾಗಿದೆ. ಊಟದ ವಿರಾಮದ ವೇಳೆಗೆ 199 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ರೋಹಿತ್ ಊಟದ ವಿರಾಮದ ಬಳಿಕ ಭರ್ಜರಿ ಸಿಕ್ಸರ್ ಮೂಲಕ ದ್ವಿಶತಕದ ಸಂಭ್ರಮವಾಚರಿಸಿದರು.
ಇನ್ನೊಂದೆಡೆ ಉಪನಾಯಕ ಅಜಿಂಕ್ಯಾ ರೆಹಾನೆ ಕೂಡಾ ಶತಕ ಸಿಡಿಸಿದರು. ಅವರು 115 ರನ್ ಗಳಿಸಿ ಔಟಾದರು. ಇತ್ತೀಚೆಗಿನ ವರದಿ ಪ್ರಕಾರ ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ 4 ವಿಕೆಟ್ ನಷ್ಟಕ್ಕೆ 363 ರನ್ ಗಳಿಸಿತ್ತು.