Publish Date: Sat, 19 Oct 2019 (10:39 IST)
Updated Date: Sat, 19 Oct 2019 (10:41 IST)
ರಾಂಚಿ: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಆಘಾತ ಅನುಭವಿಸಿದೆ.
ಆರಂಭಕ ಮಯಾಂಕ್ ಅಗರ್ವಾಲ್ ಕೇವಲ 10 ರನ್ ಗೆ ವಿಕೆಟ್ ಒಪ್ಪಿಸಿದರೆ ಚೇತೇಶ್ವರ ಪೂಜಾರ ಖಾತೆಯನ್ನೇ ತೆರೆಯಲಿಲ್ಲ. ಇಬ್ಬರ ವಿಕೆಟ್ ಕೂಡಾ ಕಗಿಸೊ ರಬಾಡಾ ಪಾಲಾಯಿತು.
ಇತ್ತೀಚೆಗಿನ ವರದಿ ಬಂದಾಗ ಟೀಂ ಇಂಡಿಯಾ 2 ವಿಕೆಟ್ ನಷ್ಟಕ್ಕೆ 31 ರನ್ ಗಳಿಸಿತ್ತು. ನಾಯಕ ಕೊಹ್ಲಿ 10 ಮತ್ತು ರೋಹಿತ್ ಶರ್ಮಾ 11 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.