Publish Date: Sat, 19 Oct 2019 (08:55 IST)
Updated Date: Sat, 19 Oct 2019 (08:57 IST)
ರಾಂಚಿ: ಭಾರತ ಮತ್ತು ದ.ಆಫ್ರಿಕಾ ನಡುವೆ ರಾಂಚಿಯಲ್ಲಿ ನಡೆಯಲಿರುವ ಮೂರನೇ ಮತ್ತು ಅಂತಿಮ ಟೆಸ್ಟ್ ನಲ್ಲಿ ಟೀಂ ಇಂಡಿಯಾ ಗೆದ್ದರೆ ಹೊಸ ಇತಿಹಾಸ ಬರೆಯಲಿದೆ.
ಭಾರತ ಈಗಾಗಲೇ ಸರಣಿಯಲ್ಲಿ 2-0 ಅಂತರದಿಂದ ಮುನ್ನಡೆ ಸಾಧಿಸಿ ಸರಣಿ ಗೆದ್ದು ಬೀಗಿದೆ. ಆದರೆ ಇಂದಿನ ಪಂದ್ಯವನ್ನು ಗೆದ್ದರೆ ಸರಣಿ ಕ್ಲೀನ್ ಸ್ವೀಪ್ ಮಾಡಿಕೊಳ್ಳಲಿದೆ.
ಒಂದು ವೇಳೆ ಇಂದಿನಿಂದ ಆರಂಭವಾಗುವ ಪಂದ್ಯವನ್ನು ಗೆದ್ದುಕೊಂಡರೆ ಭಾರತ ಇದೇ ಮೊದಲ ಬಾರಿಗೆ ದ.ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಕ್ಲೀನ್ ಸ್ವೀಪ್ ಮಾಡಿಕೊಂಡ ದಾಖಲೆ ತನ್ನದಾಗಿಸಿಕೊಳ್ಳಲಿದೆ.