Select Your Language

Notifications

webdunia
webdunia
webdunia
webdunia

ರಾಂಚಿ ಟೆಸ್ಟ್ ನಲ್ಲಿ ಟಾಸ್ ಗೆ ಬರಲ್ವಂತೆ ದ.ಆಫ್ರಿಕಾ ನಾಯಕ! ಕಾರಣ ಕೇಳಿದ್ರೆ ಶಾಕ್!

ಫಾ ಡು ಪ್ಲೆಸಿಸ್
ರಾಂಚಿ , ಶನಿವಾರ, 19 ಅಕ್ಟೋಬರ್ 2019 (08:51 IST)
ರಾಂಚಿ: ಭಾರತ ಮತ್ತು ದ.ಆಫ್ರಿಕಾ ನಡುವಿನ ತೃತೀಯ ಟೆಸ್ಟ್ ಪಂದ್ಯದಲ್ಲಿ ಟಾಸ್ ಸಂದರ್ಭದಲ್ಲಿ ದ.ಆಫ್ರಿಕಾ ನಾಯಕ ಫಾ ಡು ಪ್ಲೆಸಿಸ್ ಟಾಸ್ ಗೆ ಬರುವ ಸಾಧ್ಯತೆ ಕಡಿಮೆ! ಕಾರಣ ಕೇಳಿದ್ರೆ ನಿಮಗೆ ಕೊಂಚ ಅಚ್ಚರಿಯಾಗಬಹುದು!


ದ.ಆಫ್ರಿಕಾ ಕಳೆದ ಎರಡೂ ಪಂದ್ಯಗಳಲ್ಲಿ ಟಾಸ್ ಸೋತು ಪಂದ್ಯವನ್ನೂ ಸೋತಿತ್ತು. ಹೀಗಾಗಿ ಅಂತಿಮ ಪಂದ್ಯವನ್ನಾದರೂ ಗೆದ್ದು ಮಾನ ಉಳಿಸಬೇಕೆಂದಿದ್ದಾರೆ ಆಫ್ರಿಕನ್ನರು. ತಾನೇ ಹೋದರೆ ದುರಾದೃಷ್ಟವೋ ಏನೋ ಮತ್ತೆ ಟಾಸ್ ಸೋಲಬಹುದು, ಜತೆಗೆ ಪಂದ್ಯವನ್ನೂ ಸೋಲಬಹುದು ಎಂದು ಆಫ್ರಿಕಾ ನಾಯಕ ಫಾ ಡು ಪ್ಲೆಸಿಸ್ ತಮ್ಮ ಬದಲು ತಮ್ಮ ಸಹ ಆಟಗಾರರೊಬ್ಬರನ್ನು ಟಾಸ್ ಗೆ ಕಳುಹಿಸಲು ಚಿಂತನೆ ನಡೆಸುತ್ತಿದ್ದಾರಂತೆ.

ಹಾಗಂತ ಅವರೇ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೊಂಡಿದ್ದಾರೆ. ಇಂತಹ ಮೂಢನಂಬಿಕೆ ಆಫ್ರಿಕಾ ಕ್ರಿಕೆಟಿಗರೂ ಇದೆಯಾ ಎಂಬುದೇ ಅಚ್ಚರಿಯ ಸಂಗತಿ.

Share this Story:

Follow Webdunia kannada

ಮುಂದಿನ ಸುದ್ದಿ

ಆಕಳಿಸುವ ನಾಯಕ ಸರ್ಫರಾಜ್ ಅಹಮ್ಮದ್ ಗೆ ಗೇಟ್ ಪಾಸ್ ನೀಡಿದ ಪಾಕಿಸ್ತಾನ