Select Your Language

Notifications

webdunia
webdunia
webdunia
webdunia

ಭಾರತೀಯ ಊಟವನ್ನು ಟೀಕಿಸಿದ ದ.ಆಫ್ರಿಕಾ ಕ್ರಿಕೆಟಿಗನಿಗೆ ತಕ್ಕ ಶಾಸ್ತಿಯಾಯ್ತು!

ಭಾರತೀಯ ಊಟವನ್ನು ಟೀಕಿಸಿದ ದ.ಆಫ್ರಿಕಾ ಕ್ರಿಕೆಟಿಗನಿಗೆ ತಕ್ಕ ಶಾಸ್ತಿಯಾಯ್ತು!
ರಾಂಚಿ , ಭಾನುವಾರ, 20 ಅಕ್ಟೋಬರ್ 2019 (09:10 IST)
ರಾಂಚಿ: ಟೀಂ ಇಂಡಿಯಾ ವಿರುದ್ಧ ಕ್ರಿಕೆಟ್ ಸರಣಿ ಆಡಲು ಭಾರತಕ್ಕೆ ಬಂದಿಳಿದಿರುವ ದ.ಆಫ್ರಿಕಾ ಕ್ರಿಕೆಟಿಗ ಡೀನ್ ಎಲ್ಗರ್ ಭಾರತೀಯ ಹೋಟೆಲ್ ಮತ್ತು ಊಟದ ಬಗ್ಗೆ ಮಾಡಿದ ಟೀಕೆಯೊಂದು ಈಗ ಅವರಿಗೇ ತಿರುಗುಬಾಣವಾಗಿದೆ.


ಕ್ರೀಡಾ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಡೀನ್ ಎಲ್ಗರ್ ಭಾರತೀಯ ಹೋಟೆಲ್ ನಲ್ಲಿ ಉಳಿದುಕೊಳ್ಳುವುದು ಮತ್ತು ಇಲ್ಲಿನ ಕಳಪೆ ಆಹಾರಕ್ಕೆ ಒಗ್ಗಿಕೊಳ್ಳುವುದು ತುಂಬಾ ಕಷ್ಟ. ಮುಂದಿನ ಸಲ ಬರುವಾಗ ಸರಿಯಾಗಿ ತಯಾರಿ ಮಾಡಿಕೊಂಡೇ ಬರಬೇಕು ಎಂದಿದ್ದರು.

ಎಲ್ಗರ್  ಅವರ ಈ ಕಾಮೆಂಟ್ ಗೆ ಟ್ವಿಟರ್ ನಲ್ಲಿ ಭಾರತೀಯರು ತಕ್ಕ ತಿರುಗೇಟು ನೀಡಿದ್ದಾರೆ. ಸೋತಾಗ ಇಂತಹ ನೆಪಗಳೆಲ್ಲಾ ಸಾಮಾನ್ಯ ಎಂದು ಕೆಲವರು ಟೀಕಿಸಿದರೆ ಮತ್ತೆ ಕೆಲವರು ಭಾರತೀಯ ಕ್ರಿಕೆಟಿಗರಿಗೆ ನಿಮ್ಮ ದೇಶಕ್ಕೆ ಬಂದಾಗ ಹೋಟೆಲ್ ನಲ್ಲಿ ನೀರಿಗೂ ಗತಿಯಿಲ್ಲದೇ ಎರಡೇ ನಿಮಿಷದಲ್ಲೇ ಸ್ನಾನ ಮುಗಿಸಲು ಹೇಳಿದ್ದನ್ನು ಸ್ವಲ್ಪ ನೆನೆಪು ಮಾಡಿಕೊಳ್ಳಿ ಎಂದು ವ್ಯಂಗ್ಯ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜನವರಿಯಲ್ಲಿ ರೆಸ್ಟ್ ಮಾಡಲಿದ್ದಾರಂತೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ