Select Your Language

Notifications

webdunia
webdunia
webdunia
webdunia

ರಾಂಚಿ ಟೆಸ್ಟ್: ಮಳೆಯ ಜತೆ ಆಟವೂ ಮಂದಗಮನೆ

ರಾಂಚಿ ಟೆಸ್ಟ್: ಮಳೆಯ ಜತೆ ಆಟವೂ ಮಂದಗಮನೆ
ರಾಂಚಿ , ಶನಿವಾರ, 19 ಅಕ್ಟೋಬರ್ 2019 (16:26 IST)
ರಾಂಚಿ: ಈ ವರ್ಷ ಟೀಂ ಇಂಡಿಯಾ ಆಡುವ ಎಲ್ಲಾ ಪಂದ್ಯಗಳಲ್ಲೂ ಎದುರಾಳಿಗಳಿಗಿಂತ ಹವಾಮಾನದ ಜತೆ ಗುದ್ದಾಡುವ ಪರಿಸ್ಥಿತಿ ಎದುರಾಗಿದೆ. ಇದೀಗ ವಿಶ್ವಕಪ್ ನಿಂದ ತೊಡಗಿ ಇದೀಗ ನಡೆಯುತ್ತಿರುವ ಭಾರತ ಮತ್ತು ದ.ಆಫ್ರಿಕಾ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲೂ ಅದು ಮುಂದುವರಿದಿದೆ.


ಮೂರನೇ ಟೆಸ್ಟ್ ನ ಮೊದಲ ದಿನವಾದ ಇಂದು ಟೀಂ ಇಂಡಿಯಾ ಮಂದಬೆಳಕಿನಿಂದಾಗ ದಿನದಾಟ ಬೇಗನೇ ಮುಕ್ತಾಯವಾದಾಗ 3 ವಿಕೆಟ್ ನಷ್ಟಕ್ಕೆ 224 ರನ್ ಗಳಿಸಿತ್ತು. ಆರಂಭಿಕ ಕುಸಿತದ ಹೊರತಾಗಿಯೂ ರೋಹಿತ್ ಶರ್ಮಾ ಶತಕದ ಮೂಲಕ ಅಜಿಂಕ್ಯಾ ರೆಹಾನೆ ಅರ್ಧಶತಕದ ಮೂಲಕ ಟೀಂ ಇಂಡಿಯಾಕ್ಕೆ ಆಸರೆಯಾಗಿದ್ದು ಇಂದಿನ ದಿನದ ಹೈಲೈಟ್.

ರೋಹಿತ್ ಆರಂಭಿಕರಾಗಿ ಮೂರನೇ ಟೆಸ್ಟ್ ಪಂದ್ಯದಲ್ಲಿ ಮೂರನೇ ಶತಕ ಗಳಿಸಿದರು. ದಿನದಂತ್ಯಕ್ಕೆ ಅಜೇಯ 117 ರನ್ ಗಳಿಸಿದ್ದರೆ, ಇನ್ನೊಂದೆಡೆ ಅವರಿಗೆ ತಕ್ಕ ಸಾಥ್ ನೀಡುತ್ತಿರುವ ಉಪನಾಯಕ ಅಜಿಂಕ್ಯಾ ರೆಹಾನೆ 83 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಉಪನಾಯಕನ ಜತೆಗೆ ಕರೆತಂದರೂ ಬದಲಾಗಲಿಲ್ಲ ದ.ಆಫ್ರಿಕಾ ನಾಯಕನ ಅದೃಷ್ಟ!