Select Your Language

Notifications

webdunia
webdunia
webdunia
webdunia

ಹಳೇ ಲವರ್ ಫೋನ್ ನಂಬರ್ ಗಾಗಿ ಪ್ರಾಣ ಬಿಟ್ಟ ಪಾಗಲ್ ಪ್ರೇಮಿ

ಹಳೇ ಲವರ್ ಫೋನ್ ನಂಬರ್ ಗಾಗಿ ಪ್ರಾಣ ಬಿಟ್ಟ ಪಾಗಲ್ ಪ್ರೇಮಿ
ಲಕ್ನೋ , ಶನಿವಾರ, 7 ಮಾರ್ಚ್ 2020 (20:12 IST)
ತಾಯಿಯೊಬ್ಬಳು ತನ್ನ ಮಗಳನ್ನು ಪ್ರೀತಿಸುತ್ತಿದ್ದ ವ್ಯಕ್ತಿಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.

ಆಶಿಶ್ ಶರ್ಮಾ ಕೊಲೆಯಾದ ವ್ಯಕ್ತಿಯಾಗಿದ್ದು, ಈ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಹಳೇ ಪ್ರೇಮಿಯಾಗಿದ್ದ ಆಶಿಶ್ ತನ್ನ ಪ್ರೇಯಸಿ ಬೇರೆ ಮದುವೆಯಾಗಿದ್ದರೂ ಆಕೆಯ ಸಹವಾಸ ಬಿಟ್ಟಿರಲಿಲ್ಲ. ಪೀಡಿಸುತ್ತಲೇ ಇದ್ದ.

ಈತನ ಕಾಟಕ್ಕೆ ಬೇಸತ್ತು ಮನೆ ಬದಲಿಸಿದರೂ ಅಲ್ಲಿಗೂ ಬರುತ್ತಿದ್ದ. ಅಲ್ಲದೇ ತನ್ನ ಹಳೇ ಪ್ರೇಯಸಿಯ ಮೊಬೈಲ್ ನ ಹೊಸ ನಂಬರ್ ಕೊಡುವಂತೆ ಕೇಳಿದ್ದನು. ಈ ವಿಷಯವಾಗಿ ಲವರ್, ಆಕೆಯ ತಾಯಿ ಹಾಗೂ ಮಗ ಸೇರಿಕೊಂಡು ಕೊಲೆ ಮಾಡಿದ್ದಾರೆ.
ಶವವನ್ನು ಮನೆಯ ಹಿತ್ತಲಿನಲ್ಲಿಯೇ ಹೂತು ಹಾಕಿದ್ದರು. ಇದೀಗ ತಾಯಿ- ಮಗನನ್ನು ಪೊಲೀಸರು ಬಂಧನ ಮಾಡಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಒಂದು ಕೋಟಿ ದೇಣಿಗೆ ನೀಡಿದ ಉದ್ಧವ್ ಠಾಕ್ರೆ