Publish Date: Wed, 04 Mar 2020 (11:49 IST)
Updated Date: Wed, 04 Mar 2020 (14:00 IST)
ಲಕ್ನೋ: ಮದುವೆ ಮಾಡಿಕೊಳ್ಳಲು ತಡ ಮಾಡುತ್ತಿರುವುದರಿಂದ ಬೇಸತ್ತ ಮಹಿಳೆಯೊಬ್ಬಳು ತನ್ನ ಪ್ರಿಯಕರನನ್ನೇ ಇನ್ನೊಬ್ಬ ಪ್ರಿಯಕರನ ಜತೆ ಸೇರಿಕೊಂಡು ಕೊಂದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಈ ಪ್ರಕರಣವನ್ನು 24 ಗಂಟೆಯೊಳಗೆ ಬೇಧಿಸಲು ಪೊಲೀಸ್ ಕಮಿಷನರ್ 15 ಸಾವಿರ ರೂ. ಬಹುಮಾನ ಮೊತ್ತವನ್ನೂ ಘೋಷಿಸಿದ್ದರು. ಅದರಂತೆ ಪೊಲೀಸರು ಈ ಪ್ರಕರಣವನ್ನು ಬೇಧಿಸಿ ಆರೋಪಿ ಮಹಿಳೆ ಉಮಾ ಮತ್ತು ಆಕೆಯ ಮತ್ತೊಬ್ಬ ಪ್ರಿಯಕರನನ್ನು ಬಂಧಿಸಿದ್ದಾರೆ.
2014 ರಲ್ಲಿ ವಿವಾಹ ವಿಚ್ಛೇದನ ಪಡೆದುಕೊಂಡಿದ್ದ ಉಮಾ, ಯೋಗೇಶ್ ಸಹವಾಸಕ್ಕೆ ಬಿದ್ದಳು. ಎಂಟು ವರ್ಷಗಳಿಂದ ಇವರಿಬ್ಬರ ನಡುವೆ ಸೆಕ್ಸ್ ಸಂಬಂಧವಿತ್ತು. ಆದರೆ ಮದುವೆಯಾಗಲು ಎಷ್ಟೇ ಒತ್ತಾಯ ಮಾಡಿದರೂ ಕೌಟುಂಬಿಕ ಕಾರಣದಿಂದ ಕೆಲವು ದಿನಗಳ ಬಳಿಕ ಮದುವೆಯಾಗೋಣ ಎಂದು ಯೋಗೇಶ್ ಮುಂದೂಡುತ್ತಲೇ ಇದ್ದ. ಆದರೆ ಇದರಿಂದ ಬೇಸತ್ತ ಉಮಾ, ಸುನಿಲ್ ಎಂಬಾತನ ಜತೆ ಮದುವೆಯಾಗಲು ಸಿದ್ಧತೆ ನಡೆಸಿದ್ದಳು. ಈ ನಡುವೆ ಸುನಿಲ್ ಮತ್ತು ಉಮಾ ಜತೆ ಸೇರಿಕೊಂಡು ಯೋಗೇಶ್ ನನ್ನು ಉಪಾಯವಾಗಿ ಒಂದೆಡೆ ಕರೆಸಿಕೊಂಡು ಕತ್ತು ಸೀಳಿ ಕೊಲೆಗೈದಿದ್ದಾರೆ.