Publish Date: Sat, 07 Mar 2020 (09:08 IST)
Updated Date: Sat, 07 Mar 2020 (09:10 IST)
ಮಧುರೈ: ಹೆಣ್ಣು ಮಗುವಿನ ರಕ್ಷಣೆಗಾಗಿ ಸರ್ಕಾರ ಎಷ್ಟೇ ಯೋಜನೆಗಳನ್ನು ತಂದರೂ ಈಗಲೂ ಹೆಣ್ಣು ಮಗುವೆಂದರೆ ತಾತ್ಸಾರ ಮಾಡುವ ಮನಸ್ಥಿತಿ ಕಡಿಮೆಯಾಗಿಲ್ಲ ಎನ್ನುವುದಕ್ಕೆ ಇದುವೇ ಉದಾಹರಣೆ.
ಮಧುರೈನಲ್ಲಿ ದಂಪತಿಯೊಬ್ಬರು ಹೆಣ್ಣು ಮಗು ಹುಟ್ಟಿತೆಂದು ಒಂದೂವರೆ ತಿಂಗಳ ಹಸುಗೂಸನ್ನು ನಿರ್ದಾಕ್ಷಿಣ್ಯವಾಗಿ ಹಾಲಿಗೆ ಪಾಪಸ್ ಕಳ್ಳಿ ವಿಷ ಬೆರೆಸಿ ಕೊಲೆ ಮಾಡಿದೆ. ಬಳಿಕ ಅನಾರೋಗ್ಯದಿಂದ ಮಗು ಮೃತಪಟ್ಟಿತೆಂದು ನಾಟಕವಾಡಿದೆ.
ಆದರೆ ಮರಣೋತ್ತರ ಪರೀಕ್ಷೆಯಲ್ಲಿ ವಿಷ ಪ್ರಾಷನವಾಗಿದ್ದು ದೃಢಪಟ್ಟಿದೆ. ಇದೀಗ ಪೊಲೀಸರು ದಂಪತಿ ಹಾಗೂ ಮಗುವಿನ ತಾತನನ್ನು ಬಂಧಿಸಿದ್ದಾರೆ.