Publish Date: Fri, 06 Mar 2020 (09:17 IST)
Updated Date: Fri, 06 Mar 2020 (09:19 IST)
ನವದೆಹಲಿ: ನಿರ್ಭಯಾ ಗ್ಯಾಂಗ್ ರೇಪಿಸ್ಟ್ ಗಳಿಗೆ ಮಾರ್ಚ್ 20 ರಂದು ಗಲ್ಲು ಶಿಕ್ಷೆ ವಿಧಿಸಲು ಮತ್ತೆ ಕೋರ್ಟ್ ಆದೇಶ ನೀಡಿದೆ. ಆದರೆ ಇದು ಹುಲಿ ಬಂತು ಹುಲಿ ಕತೆಯಾಗದಿರಲಿ ಎಂಬುದೇ ಜನರ ಪ್ರಾರ್ಥನೆ.
ದೆಹಲಿಯಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ದೋಷಿಗಳೆಂದು ಸಾಬೀತಾಗಿ ಗಲ್ಲು ಶಿಕ್ಷೆ ಜಾರಿಯಾಗಿ ಮೂರು ಬಾರಿ ಗಲ್ಲು ಶಿಕ್ಷೆ ಜಾರಿಗೊಳಿಸಲು ದಿನಾಂಕ ನಿಗದಿಯಾದರೂ ಅಪರಾಧಿಗಳು ಮಾತ್ರ ಕಳ್ಳಾಟವಾಡುತ್ತಾ ಕಾನೂನಿನ ನೆಪದಲ್ಲಿ ಮುಂದೂಡಿಕೆ ಮಾಡುತ್ತಲೇ ಇದ್ದಾರೆ.
ಈ ಬಾರಿ ನಾಲ್ಕನೇ ಬಾರಿಗೆ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜಾರಿಗೊಳಿಸಲು ದಿನ ನಿಗದಿಯಾಗಿದೆ. ಈ ಬಾರಿಯಾದರೂ ಶಿಕ್ಷೆ ಜಾರಿಯಾಗಿ ನಿರ್ಭಯಾ ಮನೆಯವರ ಹೋರಾಟಕ್ಕೆ ಜಯ ಸಿಕ್ಕರೆ ಮಿಕ್ಕ ಅತ್ಯಾಚಾರಿಗಳಿಗೂ ಪಾಠವಾಗಲಿದೆ.