Publish Date: Mon, 02 Mar 2020 (09:03 IST)
Updated Date: Mon, 02 Mar 2020 (09:05 IST)
ಲಕ್ನೋ: ಅಕ್ರಮ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಪತ್ನಿಯನ್ನೇ ಪತಿ ಗುಂಡಿಕ್ಕಿ ಕೊಲೆಗೈದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಪತ್ನಿಯನ್ನು ಕೊಲೆ ಮಾಡಿದ ಬಳಿಕ ಪೊಲೀಸರ ಬಳಿ ತೆರಳಿದ ಆರೋಪಿ ನೇತ್ರಪಾಲ್ ಸಿಂಗ್ ದರೋಡೆಕೋರರು ಮನೆಯಲ್ಲಿದ್ದ 1.25 ಲಕ್ಷ ನಗದು ದೋಚಿ ಪತ್ನಿಯನ್ನು ಕೊಲೆ ಮಾಡಿದ್ದಾರೆ ಎಂದು ನಾಟಕವಾಡಿದ್ದ.
ಆದರೆ ಈ ಘಟನೆಗೆ ಸಾಕ್ಷಿಯಾಗಿದ್ದ ಮಕ್ಕಳ ಬಾಯಿಂದ ನಿಜ ಸಂಗತಿ ಬಯಲಾಗಿತ್ತು. ಇದರೊಂದಿಗೆ ಆರೋಪಿಯನ್ನು ಬಂಧಿಸಲಾಗಿದೆ.